ನವದೆಹಲಿ: ಒಂದೇ ಒಲಿಂಪಿಕ್ಸ್ ನಲ್ಲಿ ಎರಡು ಪದಕ ಗೆದ್ದ ಮೊದಲ ಭಾರತೀಯ ಅಥ್ಲೀಟ್ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿರುವ ಮನು ಭಾಕರ್ ಅವರು ಬುಧವಾರ ಬೆಳಿಗ್ಗೆ ದೆಹಲಿಗೆ ಬಂದಿಳಿದಿದ್ದು ಭರ್ಜರಿ ಸ್ವಾಗತ ನೀಡಲಾಗಿದೆ.
ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಾಖಲೆ ಬರೆದ ಶೂಟರ್ ಗೆ ವಿಮಾನ ನಿಲ್ದಾಣದ ಸಿಬಂದಿಗಳು, ಮಾಧ್ಯಮ ಪ್ರತಿನಿಧಿಗಳು, ಅಭಿಮಾನಿಗಳು, ಮನು ಭಾಕರ್ ಅವರ ಪೋಷಕರು, ಸಂಬಂಧಿಕರು, ಬಾಲ್ಯದ ತರಬೇತುದಾರರು ಹೂಮಳೆ ಗೈದು ಭವ್ಯವಾದ ಸ್ವಾಗತ ನೀಡಿದರು.
22 ರ ಹರೆಯದ ಮನು ವನಿತೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನೊಂದಿಗೆ ಪದಕಪಟ್ಟಿಯಲ್ಲಿ ಭಾರತದ ಖಾತೆಯನ್ನು ತೆರೆದ ಬಳಿಕ ಸರಬ್ಜೋತ್ ಸಿಂಗ್ ಅವರೊಂದಿಗೆ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಇನ್ನೊಂದು ಕಂಚಿನ ಪದಕ ಸೇರಿಸಿದ್ದರು.
#WATCH | Double Olympic medalist in shooting, Manu Bhaker and her coach Jaspal Rana receive a grand welcome after they arrive at Delhi airport after Manu Bhaker's historic performance in #ParisOlympics2024
— ANI (@ANI) August 7, 2024
She won bronze medals in Women’s 10m Air Pistol & the 10m Air Pistol… pic.twitter.com/h7syhyk1Sy