ಅಂತಿಮ ಹಂತ ತಲುಪಿದ ಮಂಗಳೂರು- ಬೆಂಗಳೂರು ರೈಲು ಮಾರ್ಗದ ದುರಸ್ತಿ ಕಾರ್ಯ

Prasthutha|

►ಈ ದಿನದಿಂದ ರೈಲು ಓಡಾಟ ಆರಂಭ

- Advertisement -


ಮಂಗಳೂರು: ಎಡಕುಮೇರಿ-ಕಡಗರವಳ್ಳಿ ನಡುವಿನ ದೋಣಿಹಗಲ್ ನ ರೈಲು ಮಾರ್ಗದಲ್ಲಿ ಸಂಭವಿಸಿದ ಭೂಕುಸಿತದ ದುರಸ್ತಿ ಕಾರ್ಯವು ಅಂತಿಮ ಹಂತ ತಲುಪಿದೆ. ಘಟನಾ ಸ್ಥಳದಲ್ಲಿ ರೈಲು ಇಂಜಿನ್ ನ ಪ್ರಾಯೋಗಿಕ ಸಂಚಾರ ಯಶಸ್ವಿ ಕಂಡಿದೆ.


ಮಂಗಳೂರು-ಬೆಂಗಳೂರು ರೈಲು ಮಾರ್ಗದ ಸಕಲೇಶಪುರ ಹಾಗೂ ಸುಬ್ರಹ್ಮಣ್ಯ ರಸ್ತೆ ನಿಲ್ದಾಣದಲ್ಲಿ ನಡೆದ ಭೀಕರ ಭೂಕುಸಿತದಿಂದ ಕಳೆದ ಒಂದು ವಾರದಿಂದ 12 ರೈಲುಗಳ ಓಡಾಟ ರದ್ದುಗೊಂಡಿತ್ತು. ಈ ರೈಲು ರದ್ದು ಆದೇಶವನ್ನು ನೈಋತ್ಯ ರೈಲ್ವೆ ವಲಯವು ಆಗಸ್ಟ್ 6 ರವರೆಗೆ ಮತ್ತೆ ಮುಂದೂಡಿದೆ.

- Advertisement -


ಈ ಹಿಂದೆ ಆಗಸ್ಟ್ 4ರವರೆಗೆ ರೈಲು ರದ್ದುಗೊಂಡಿತ್ತು. ಇದೀಗ ಮತ್ತೆ 12 ರೈಲುಗಳ ಓಡಾಟ ರದ್ದು ವಿಸ್ತರಿಸಲಾಗಿದೆ.


ಅದರಂತೆ ಬೆಂಗಳೂರು-ಕಣ್ಣೂರು, ಕಣ್ಣೂರು-ಬೆಂಗಳೂರು, ಬೆಂಗಳೂರು-ಕಾರವಾರ, ಕಾರವಾರ-ಬೆಂಗಳೂರು, ಬೆಂಗಳೂರು-ಮುರ್ಡೇಶ್ವರ, ಮುರ್ಡೇಶ್ವರ-ಬೆಂಗಳೂರು, ವಿಜಯಪುರ-ಮಂಗಳೂರು ಸೆಂಟ್ರಲ್, ಮಂಗಳೂರು ಸೆಂಟ್ರಲ್-ವಿಜಯಪರ, ಯಶವಂತಪುರ-ಕಣ್ಣೂರು, ಕಾರವಾರ-ಯಶವಂತಪುರ, ಯಶವಂತಪುರ-ಮಂಗಳೂರು ಜಂಕ್ಷನ್ ಹಾಗೂ ಮಂಗಳೂರು ಜಂಕ್ಷನ್-ಯಶವಂತಪುರ ರೈಲು ನಿಲ್ದಾಣ ಹೀಗೆ ಒಟ್ಟು 12 ರೈಲುಗಳನ್ನು ರದ್ದು ಪಡಿಸಲಾಗಿದೆ.


ಇದೀಗ ಈ ರೈಲುಗಳು ಆಗಸ್ಟ್ 7ರಿಂದ ಓಡಾಟ ನಿರೀಕ್ಷೆ ಹೊಂದಲಾಗಿದೆ. ಸುಮಾರು 400 ಮಂದಿ ತಂಡವಾಗಿ ಯಡಕುಮೇರಿ ಹಾಗೂ ಕಡಗರವಳ್ಳಿ ಮಧ್ಯೆ ನಡೆದ ಭೂಕುಸಿತವನ್ನು ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸಿ ಸರಿಪಡಿಸಿದ್ದಾರೆ.



Join Whatsapp