ವಯನಾಡು: 6 ದಿನಗಳಿಂದ ಹುಡುಕುತ್ತಿದ್ದ ಮಾಲಕರು ಸಿಕ್ಕಿದಾಗ ನಾಯಿಯ ಹೃದಯಸ್ಪರ್ಷಿ ಪ್ರತಿಕ್ರಿಯೆ

Prasthutha|

ವಯನಾಡು: ವಯನಾಡು ದುರಂತದ ವೇಳೆ ಮನೆ ಕೊಚ್ಚಿ ಹೋದ ಮನೆಗಳ ನಡುವೆ ಕಳೆದ 6 ದಿನಗಳಿಂದ ಮಾಲೀಕನ ಹುಡುಕುತ್ತಿದ್ದ ನಾಯಿಯೊಂದು ಕೊನೆಗೂ ಅನ್ನ ಹಾಕಿದ ಒಡತಿಯನ್ನು ನಾಯಿ ಪತ್ತೆ ಹಚ್ಚಿದಾಗ ವರ್ತಿಸಿದ ರೀತಿ ಹೃದಯಸ್ಪರ್ಷಿಯಾಗಿದೆ‌. ನಾಯಿ ದುರಂತ ಸ್ಥಳದಲ್ಲಿನ ಪ್ರದೇಶದಲ್ಲಿ ಮೌನವಾಗಿ ಹುಡುಕಾಟ ಮುಂದುವರಿಸಿತ್ತು. ಮನೆ ಕೊಚ್ಚಿ ಹೋದ ಬಳಿಕ 6ನೇ ದಿನ ಮನೆ ಸದಸ್ಯರು ತಮ್ಮ ಮನೆ ಇದ್ದ ಸ್ಥಳಕ್ಕೆ ಆಗಮಿಸಿದ್ದಾರೆ. ಈ ವೇಳೆ ದೂರದಲ್ಲಿದ್ದ ನಾಯಿ ಮಾಲೀಕರ ಗುರುತಿಸಿ ಓಡೋಡಿ ಬಂದಿದೆ. ಒಡತಿಯನ್ನು ಮೇಲೆ ಬಿದ್ದು ಮುದ್ದಾಡಿದೆ. ಈ ಹೃದಸ್ಪರ್ಶಿ ವಿಡಿಯೋ ವೈರಲ್ ಆಗಿದೆ.

- Advertisement -

ಕಳೆದ 6 ದಿನಗಳಿಂದ ಈ ನಾಯಿ ದುರಂತ ಸ್ಥಳದಲ್ಲೇ ಬೀಡು ಬಿಟ್ಟಿದೆ. ಕೊಚ್ಚಿ ಹೋಗಿ ಮಣ್ಣು ತುಂಬಿಕೊಂಡಿರುವ ಮನೆ ಜಾಗದಲ್ಲಿ ಮಾಲೀಕನಿಗಾಗಿ ಹುಡುಕಾಡುತ್ತಾ ಓಡಾಡಿದೆ. ದುರಂತ ಸ್ಥಳದಲ್ಲಿ ಪತ್ತೆಯಾದ ನಾಯಿ, ಬೆಕ್ಕು, ದನ ಕರುಗಳಿಗೆ ಸ್ವಯಂ ಸೇವಕರು ಆಹಾರ ಒದಗಿಸುತ್ತಿದ್ದಾರೆ. ಅದನ್ನು ಪೂರ್ತಿ ತಿನ್ನದೆ ಅರೆ ಬರೆ ತಿನ್ನುತ್ತಾ ಹುಡುಕಾಟ ಮುಂದುವರೆಸಿತ್ತು. ಒಂದೆಡೆ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿದ್ದರೆ, ನಾಯಿ ಹುಡುತ್ತಿದ್ದ ಮನೆ ಕುಟುಂಬ ಸದಸ್ಯರ ಮಾಲೀಕರನ್ನು ದುರಂತ ಸ್ಥಳದಿಂದ ಬೇರೆಡೆಗೆ ಸ್ಥಳಾಂತರ ಮಾಡಲಾಗಿತ್ತು.

ವಯನಾಡು ಸಮೀಪದ ಮುಂಡಕೈ ಹಾಗೂ ಚೂರಲ್‌ವುಲ ಗ್ರಾಮಗಳ ಮಧ್ಯೆ 630 ಮನೆಗಳು ಇದ್ದವು ಎನ್ನಲಾಗಿದೆ. ಬಹುತೇಕ ಮನೆಗಳು ಕುಸಿದರೆ, ಕೆಲವು ಅನಾಥವಾಗಿವೆ. ಸುಮಾರು 380 ಮೃತದೇಹಗಳು ಸಿಕ್ಕಿವೆ. ಇನ್ನೂರಕ್ಕೂ ಹೆಚ್ಚು ಮಂದಿ‌ ಕಾಣೆಯಾಗಿದ್ದಾರೆ.



Join Whatsapp