ಕಲಾಪಕ್ಕೆ ಅಡ್ಡಿ: ಜಾರ್ಖಂಡ್ ವಿಧಾನಸಭೆಯಿಂದ 18 ಬಿಜೆಪಿ ಶಾಸಕರು ಅಮಾನತು

Prasthutha|

ರಾಂಚಿ: ಕಲಾಪಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ 18 ಬಿಜೆಪಿ ಶಾಸಕರನ್ನು ವಿಧಾನಸಭೆಯಿಂದ ಅಮಾನತುಗೊಳಿಸಲಾಗಿದೆ.

- Advertisement -


ವಿಧಾನಸಭೆಯ ನೈತಿಕ ಸಮಿತಿ ಈ ಬಗ್ಗೆ ತನಿಖೆ ನಡೆಸಿ 1 ವಾರದೊಳಗೆ ವರದಿ ಸಲ್ಲಿಸಲಿದೆ ಎಂದು ಸ್ಪೀಕರ್ ಹೇಳಿದ್ದಾರೆ. ಅಧಿವೇಶನ ಆರಂಭಕ್ಕೂ ಮುನ್ನ ಬಿಜೆಪಿ ಶಾಸಕರು ಸದನದ ಬಾವಿಗೆ ನುಗ್ಗಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ರಾಜೀನಾಮೆಗೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು. ಬಾವಿಯಲ್ಲಿದ್ದ ಕೆಲವು ದಾಖಲೆಗಳನ್ನು ಹರಿದು ಹಾಕುತ್ತಿರುವುದು ಕೂಡ ಕಂಡು ಬಂದಿದೆ. ಅಮಾನತುಗೊಂಡ ನಂತರವೂ ಶಾಸಕರು ಸದನದಿಂದ ಹೊರಬರಲು ನಿರಾಕರಿಸಿದ್ದರಿಂದ, ಅವರು ಮಾರ್ಷಲ್ ಗಳನ್ನು ಕರೆದು ಆ ವಿಪಕ್ಷ ಸದಸ್ಯರನ್ನು ಹೊರಹಾಕಿದ್ದಾರೆ.


ಇಂದು ಸದನದಿಂದ ಹೊರಬರಲು ನಿರಾಕರಿಸಿದ ಆ ಶಾಸಕರನ್ನು ಮಾರ್ಷಲ್ ಗಳು ಎತ್ತಿಕೊಂಡು ಹೋಗಿ ಹೊರಹಾಕಿದ್ದಾರೆ. ಈ ವೇಳೆ ಸದನದ ನೆಲದ ಮೇಲೆ ಬಿದ್ದು ಹೊರಳಾಡಿ ಶಾಸಕರು ಪ್ರತಿಭಟನೆಯನ್ನು ಮಾಡಿದ್ದಾರೆ.

- Advertisement -

ಜಾರ್ಖಂಡ್‌ನಲ್ಲಿ ಸರ್ವಾಧಿಕಾರವಿದೆ ಎಂದು ವಿರೋಧ ಪಕ್ಷದ ನಾಯಕ ಅಮರ್ ಬೌರಿ ಆರೋಪಿಸಿದ್ದಾರೆ. 



Join Whatsapp