ಬ್ಯಾರಿಸ್ ಸೆಂಟ್ರಲ್ ಕಮಿಟಿ ಬೆಂಗಳೂರು ಇದರ ಅಂಗಸಂಸ್ಥೆಯಾದ ಬ್ಯಾರಿಸ್ ಮೊಬೈಲ್ ಶಾಪ್ ಅಸೋಸಿಯೇಷನ್ ನ ಸಭೆಯು ದಿನಾಂಕ 30/07/2024, ಮಂಗಳವಾರ, ರಾಜಾಜಿನಗರದ ಔರಾ ಇನ್ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಶಬೀರ್ ಬ್ರಿಗೇಡ್ ವಹಿಸಿದ್ದರು.
ಸಭೆಯಲ್ಲಿ ಮೊಬೈಲ್ ಶಾಪ್ ಮಾಲೀಕರು ಮತ್ತು ಉದ್ಯೋಗಿಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಬ್ಯಾರಿ ಮೊಬೈಲ್ ಶಾಪ್ ಮಾಲಕರ ಮತ್ತು ಉದ್ಯೋಗಿಗಳ ಸಮಸ್ಯೆಗಳಿಗೆ ನೆರವಾಗುವುದರೊಂದಿಗೆ ದೂರದೃಷ್ಟಿಯ ಯೋಜನೆ ಇಟ್ಟು ಸಮಗ್ರ ಅಭಿವೃದ್ಧಿಯಾಗಿ ಬ್ಯಾರಿ ಸಮುದಾಯಕ್ಕೆ ದೊಡ್ಡ ಕೊಡುಗೆ ನೀಡುವ ಉದ್ದೇಶ ಇಟ್ಟು ಬ್ಯಾರಿಸ್ ಮೊಬೈಲ್ ಶಾಪ್ ಅಸೋಸಿಯೇಷನ್ ನ ವರ್ಕಿಂಗ್ ಕಮಿಟಿ ಆಯ್ಕೆ ಮಾಡಿ, ಹೊಸ ಪದಾಧಿಕಾರಿಗಳನ್ನು ನೇಮಿಸಲಾಯಿತು.
ಆಯ್ಕೆಯಾದ ಪದಾಧಿಕಾರಿಗಳು:
ಅಧ್ಯಕ್ಷರು : ಇರ್ಷಾದ್ ಬಜಾಲ್
ಪ್ರಧಾನ ಕಾರ್ಯದರ್ಶಿ : ಸಲಿತ್ ಮಾರ್ಥಳ್ಳಿ
ಉಪಾಧ್ಯಕ್ಷರುಗಳು :
ಅಹ್ಮದ್ ಎಂ. ಆರ್. ಎಂ
ಅಮೀನ್ ಫೋನ್ ಪಾರ್ಕ್
ಕಾರ್ಯದರ್ಶಿಗಳು :
ರಿಜ್ವಾನ್ ಕಿನ್ಯ ಫೋನ್ ಪ್ಲಸ್
ಫಾರೂಕ್ ಉತ್ತರಲ್ಲಿ
ಕೋಶಾಧಿಕಾರಿ :
ರಿಯಾಝ್ ಬೆಳ್ಳಂದೂರ್
ಕಮಿಟಿ ಸದಸ್ಯರುಗಳು :
ನಝೀರ್ ಮಲ್ಲೇಶ್ವರಂ
ಸಿದ್ದೀಕ್ ಕಾಜೂರ್
ಹಾರಿಸ್ ಎಸ್ ಎಂ
ನಾಸಿರ್ ಗಿರಿನಗರ
ಇಸ್ಮಾಯಿಲ್
ರಾಝಿಕ್ ಯುವರ್ ಚಾಯ್ಸ್
ಹಾರಿಸ್ ಮಾಡ್ದಡ್ಕ
ಆಫ್ಜಲ್ ಮೊಬೈಲ್ ಎಕ್ಸ್ ಪೋ
ಹಾರಿಸ್ ಫೋನ್ ಪಾರ್ಕ್
ಸಿರಾಜ್ ಹೆಬ್ಬಾಳ್
ಮುಕ್ತಾರ್ ಇಲೆಕ್ಟ್ರಾನಿಕ್ ಸಿಟಿ
ಇಕ್ಬಾಲ್ ಸಹಕಾರ್ ನಗರ
ಮುಝಮ್ಮಿಲ್ ವಸಂತನಗರ
ಅನ್ಸಾರ್ ನಾಗಶೆಟ್ಟಿಹಳ್ಳಿ
ರಹ್ಮಾನ್ ಇಂದಿರಾನಗರ ಐ ಕನೆಕ್ಟ್
ನೌಶಾದ್
ಸ್ವಾಲಿ ರೈಲ್ವೆ ಮೆಜೆಸ್ಟಿಕ್
ಶಾಕಿರ್ ಎಕ್ಸ್ಪರ್ಟ್
ತನ್ಸೀರ್ ಮಲ್ಲೇಶ್ವರಂ
ಆಶಿಕ್ ಬೋಸ್ಟಂ ಸರ್ಕಲ್
ಸಭೆಯಲ್ಲಿ ಬೆಂಗಳೂರು ನಗರದ ವಿವಿಧ ಪ್ರದೇಶದಲ್ಲಿರುವ 150 ಕ್ಕೂ ಅಧಿಕ ಬ್ಯಾರಿ ಮೊಬೈಲ್ ಶಾಪ್ ಮಾಲೀಕರು ಹಾಜರಿದ್ದರು, ಸಭೆಯು ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳ ಹಿತವಚನದೊಂದಿಗೆ ಸಮಾಪ್ತಿಗೊಂಡಿತು. ಈ ಸಂದರ್ಭದಲ್ಲಿ ಬ್ಯಾರಿಸ್ ಸೆಂಟ್ರಲ್ ಕಮಿಟಿಯ ಪದಾಧಿಕಾರಿಗಳು ಹಾಜರಿದ್ದರು