ನವದೆಹಲಿ: ಮಾಂಸಾಹಾರ ಸರ್ವ್ ಮಾಡಿದಕ್ಕೆ ವೃದ್ಧ ಪ್ರಯಾಣಿಕರೊಬ್ಬರು ವಂದೇ ಭಾರತ್ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿರುವ ಘಟನೆ ವರದಿಯಾಗಿದೆ.
ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ವಿಡಿಯೋ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಈ ಘಟನೆ ಜುಲೈ 26 ರಂದು ಹೌರಾದಿಂದ ರಾಂಚಿಗೆ ಪ್ರಯಾಣಿಸುತ್ತಿದ್ದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನಲ್ಲಿ ಈ ಘಟನೆ ಸಂಭವಿಸಿದೆ.
ವಂದೇ ಭಾರತ್ ರೈಲಿನಲ್ಲಿ ಸಸ್ಯಹಾರಿಯಾದ ಪ್ರಯಾಣಿಕರೊಬ್ಬರು ಲೇಬಲ್ ಗಮನಿಸದೆ ಆಕಸ್ಮಿಕವಾಗಿ ಮಾಂಸಹಾರ ಸೇವಿಸಿದ್ದಾರೆ. ಎರಡು ತುತ್ತು ತಿಂದ ಬಳಿಕ ಮಾಂಸಾಹಾರ ಎಂದು ತಿಳಿದು ಕೋಪಗೊಂಡ ವ್ಯಕ್ತಿ ಮಾಂಸಾಹಾರ ಸರ್ವ್ ಮಾಡಿದ ವಂದೇ ಭಾರತ್ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ್ದಾರೆ.
Vande Bharat by mistake served Non-Veg food to a old person. He didn't saw instructions and ate the food. Being vegetarian he realised it tastes like non-veg so he got furious & gave 2 tight slap to the waiter.
— Kunal Verma (@itsmekunal07) July 27, 2024
Vande Bharat – Howrah to Ranchi
Date – 26/ July/ 24
Live recording- pic.twitter.com/Mg0skE3KLo