ಸರ್ವಾಧಿಕಾರಿ ಧೋರಣೆಯ ವಿರುದ್ಧ ಎಎಪಿ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆಗೆ SDPI ಬೆಂಬಲ: ಅಬ್ದುಲ್ ಮಜೀದ್

Prasthutha|

ಬೆಂಗಳೂರು: ಮೋದಿ ನೇತೃತ್ವದ ಸರ್ಕಾರದ ಈ ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸಿ ಎಎಪಿ ಪಕ್ಷ ಇಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆಗೆ ನಮ್ಮ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ ಡಿ ಪಿ ಐ) ಪಕ್ಷ ಸಂಪರ್ಣ ಬೆಂಬಲ ನೀಡುತ್ತದೆ ಎಂದು ಪಕ್ಷದ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಅವರು ತಮ್ಮ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

- Advertisement -

ಆರಂಭದಲ್ಲಿ ವಿಪಕ್ಷದ ನಾಯಕರು, ಶಾಸಕರು, ಸಂಸರು, ಮಂತ್ರಿಗಳನ್ನು ಈ ರೀತಿ ಬಂಧಿಸುತ್ತದ್ದ ಬಿಜೆಪಿ ಸರ್ಕಾರ ನಂತರ ಮುಖ್ಯಮಂತ್ರಿಗಳನ್ನೇ ಗುರಿ ಮಾಡಿಕೊಂಡಿತು. ಅದರ ಭಾಗವಾಗಿ ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಜಾರ್ಖಂಡ್ ರಾಜ್ಯದ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು ಬಂಧಿಸಿದರು. ಅದರಲ್ಲಿ ಹೇಮಂತ್ ಸೊರೇನ್ ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ. ಆದರೆ ಕೇಜ್ರಿವಾಲರನ್ನು ಒಂದು ಪ್ರಕರಣದಲ್ಲಿ ಜಾಮೀನು ಸಿಕ್ಕರೆ ಮತ್ತೊಂದು ಪ್ರಕರಣ ಎಂದು ನಿರಂತರವಾಗಿ ಜೈಲಿನಲ್ಲಿಡುವ ನೀಚ ಕಾರ್ಯ ಮಾಡುತ್ತಿದೆ. ಇದು ಈ ದೇಶದಲ್ಲಿ ವಿಪಕ್ಷವನ್ನೇ ಇಲ್ಲದಂತಾಗಿಸಬೇಕು, ಆ ಮೂಲಕ ದೇಶದಲ್ಲಿ ಬಾಬಾ ಸಾಹೇಬರ ಸಂವಿಧಾನವನ್ನು ಇಲ್ಲವಾಗಿಸಿ ಸರ್ವಾಧಿಕಾರವನ್ನು ಸ್ಥಾಪಿಸಬೇಕು ಎಂಬ ಸಂಘಪರಿವಾರ ಸೂಚಿತ ಹುನ್ನಾರಕ್ಕೆ ಪೂರಕವಾದ ಮೋದಿ ಮತ್ತು ಅಮಿತ್ ಶಾ ಅವರ ಕ್ರಮವಾಗಿದೆ. ಇದನ್ನು ದೇಶದ ಪ್ರತಿಯೊಬ್ಬ ಪ್ರಜೆಯೂ ಗಟ್ಟಿ ಧ್ವನಿಯಲ್ಲಿ ವಿರೋಧಿಸಬೇಕು ಮತ್ತು ನಮ್ಮ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಬೇಕಾದೆ. ಈ ನಿಟ್ಟಿನಲ್ಲಿ ಯಾವುದೇ ಪಕ್ಷ, ಸಂಘಟನೆ ಹಮ್ಮಿಕೊಳ್ಳುವ ಯಾವುದೇ ರೀತಿ ಸಂವಿಧಾನಾತ್ಮಕ ಹೋರಾಟಕ್ಕೆ ಎಸ್ ಡಿ ಪಿ ಐ ಪಕ್ಷ ಸದಾ ಜೊತೆಯಾಗಲಿದೆ ಎಂದು ಮಜೀದ್ ಅವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದುವರಿದೆ ಮಜೀದ್ ಅವರು ಎಲ್ಲರೂ ಒಟ್ಟಾಗಿ ಹೋರಾಡಿ ನಮ್ಮ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳೋಣ ಎಂಬ ಕರೆಯನ್ನು ನಾಡಿನ ಜನತೆಗೆ ತಮ್ಮ ಪ್ರಕಟಣೆಯ ಮೂಲಕ ನೀಡಿದ್ದಾರೆ.



Join Whatsapp