ಮುಸ್ಲಿಮರನ್ನು ‌ಸರ್ಕಾರ ಅಸ್ಪೃಶ್ಯರಂತೆ ಕಾಣುತ್ತಿದೆ: ಓವೈಸಿ ಟೀಕೆ

Prasthutha|

‘ಬಜೆಟ್’ನಲ್ಲಿ ಮುಸ್ಲಿಂ ಸಮುದಾಯವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ’

- Advertisement -

ನವದೆಹಲಿ: ಮುಸ್ಲಿಮರನ್ನು ‌ಸರ್ಕಾರ ಅಸ್ಪೃಶ್ಯರಂತೆ ಪರಿಗಣಿಸುತ್ತಿದೆ. ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಭಾಷಣದಲ್ಲಿ ಮುಸ್ಲಿಂ ಸಮುದಾಯವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಎಐಎಂಐಎಂನ ಅಧ್ಯಕ್ಷ, ಸಂಸದ ಅಸಾದುದ್ಧೀನ್‌ ಓವೈಸಿ ಆರೋಪಿಸಿದರು.

ಲೋಕಸಭೆಯಲ್ಲಿ ಬಜೆಟ್‌ ಮೇಲಿನ ಚರ್ಚೆಯ ವೇಳೆ ಮಾತನಾಡಿದ ಅವರು, ‘ಮುಸ್ಲಿಮರನ್ನು ‌ಸರ್ಕಾರ ಅಸ್ಪೃಶ್ಯರಂತೆ ಪರಿಗಣಿಸುತ್ತಿದೆ’ ಎಂದು ಕಿಡಿಕಾರಿದರು.

- Advertisement -

ಬಜೆಟ್ ಭಾಷಣದ ವೇಳೆ ನಿರ್ಮಲಾ ಸೀತಾರಾಮನ್ ಅವರು ನಾಲ್ಕು ಸಮುದಾಯದ ಬಗ್ಗೆ ಉಲ್ಲೇಖಸಿದ್ದಾರೆ. ಈ ದೇಶದ 17 ಕೋಟಿ ಮುಸ್ಲಿಮರಲ್ಲಿ ಬಡವರು, ಯುವಕರು, ರೈತರು ಅಥವಾ ಮಹಿಳೆಯರು ಇಲ್ಲವೇ?’ ಎಂದು ಒವೈಸಿ ಪ್ರಶ್ನಿಸಿದರು.

ಈ ದೇಶದಲ್ಲಿ ಮುಸ್ಲಿಮರು ಕಡು ಬಡವರಾಗಿದ್ದು, ಮುಸ್ಲಿಂ ಸಮುದಾಯದ ಮಹಿಳೆಯರು ಸಾಕಷ್ಟು ಕಷ್ಟಗಳನ್ನು ಎದುರಿಸುತ್ತಿದ್ದಾರೆ ಎಂದರು.

15ರಿಂದ 24 ವಯಸ್ಸಿನ ಮುಸ್ಲಿಮರಲ್ಲಿ ಶೇ 29ರಷ್ಟು ಮಂದಿ ಶಿಕ್ಷಣ ಪಡೆಯಲು ಸಶಕ್ತರಾಗಿದ್ದಾರೆ. ಇದಕ್ಕೆ ಹೋಲಿಸಿದರೆ ಪರಿಶಿಷ್ಟ ಜಾತಿಯಲ್ಲಿ ಶೇ.44, ಹಿಂದೂಳಿದ ವರ್ಗದವರಲ್ಲಿ ಶೇ 51 ಮತ್ತು ಹಿಂದೂ ಮೇಲ್ವರ್ಗದ ಜಾತಿಗಳಲ್ಲ ಶೇ 59ರಷ್ಟು ಮಂದಿ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಕೆಲ ದಾಖಲೆಗಳನ್ನು ಮುಂದಿಟ್ಟು ವಾದ ಮಂಡಿಸಿದರು.



Join Whatsapp