ದ.ಕ ಲೋಕಸಭಾ ಸೋಲು : ಕಾಂಗ್ರೆಸ್ ಸತ್ಯಶೋಧನೆ

Prasthutha|

►ಜಿಲ್ಲಾ ಕಚೇರಿಯಲ್ಲಿ ಸಮಿತಿ.. ನಾಯಕರು, ಕಾರ್ಯಕರ್ತರ ಜಮಾವಣೆ

- Advertisement -

ಮಂಗಳೂರು : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲಿನ ಪರಾಮರ್ಶೆ ನಡೆಸಲು ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್ ಉಗ್ರಪ್ಪ ನೇತೃತ್ವದ ಸತ್ಯಶೋದನಾ ಸಮಿತಿ ಮಂಗಳೂರಿಗೆ ಆಗಮಿಸಿದೆ.

ವಿ.ಎಸ್ ಉಗ್ರಪ್ಪ ನೇತೃತ್ವದಲ್ಲಿ ದ.ಕ, ಉಡುಪಿ, ಚಿಕ್ಕಮಗಳೂರು, ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆ ಸೇರಿದಂತೆ ಕರಾವಳಿ ವಿಭಾಗದಲ್ಲಿ ಕಾಂಗ್ರೆಸ್ ಸೋಲಿನ ವರದಿ ಪಡೆಯಲು ಕೆಪಿಸಿಸಿ ನೇಮಿಸಿರುವ ಸತ್ಯಶೋಧನಾ ಸಮಿತಿ ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಪರಾಮರ್ಶೆ ನಡೆಸುತ್ತಿದೆ.
ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಮತ್ತು ನೂರಾರು ಕಾರ್ಯಕರ್ತರು ಜಮಾವಣೆಯಾಗಿದ್ದು, ಸಮಿತಿ ಮುಂದೆ ಸೋಲಿಗೆ ಕಾರಣಗಳನ್ನು ತಿಳಿಸುತ್ತಿದ್ದಾರೆ. ಸಮಿತಿ ಜೊತೆ ಮುಕ್ತವಾಗಿ ಮಾತನಾಡಲು ಕಾರ್ಯಕರ್ತರಿಗೂ ಅವಕಾಶ ನೀಡಲಾಗಿದೆ. ಕಾರ್ಯಕರ್ತರು ಜಿಲ್ಲೆಯ ಪಕ್ಷದ ವಿದ್ಯಮಾನಗಳ ಬಗ್ಗೆ ಮುಕ್ತವಾಗಿ ಮಾತನಾಡುತ್ತಿದ್ದು, ಒಂದಷ್ಟು ದೂರು ಕೂಡ ಸಲ್ಲಿಸುತ್ತಿದ್ದಾರೆ.

- Advertisement -

ಪಕ್ಷ ಬಲಪಡಿಸುವುದು, ಪಕ್ಷದ ಬಲವರ್ಧನೆಗಾಗಿ ರಮನಾಥ ರೈ ಅವರಿಗೆ ಜವಾಬ್ದಾರಿ ನೀಡುವುದು, ಜಿಲ್ಲಾಧ್ಯಕ್ಷರ ಬದಲಾವಣೆ, ಸಮುದಾಯಗಳಿಗೆ ಪ್ರಾತಿನಿಧ್ಯ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಡುತ್ತಿದ್ದಾರೆ.

ಉಗ್ರಪ್ಪ ನೇತೃತ್ವದ ಕರಾವಳಿ ವಿಭಾಗದ ಸತ್ಯಶೋದನಾ ಸಮಿತಿಯಲ್ಲಿ ಸಂಚಾಲಕರಾಗಿ ಮಾಜಿ ಪರಿಷತ್ ಸದಸ್ ಪಿ.ಆರ್. ರಮೇಶ್, ಸದಸ್ಯರಾಗಿ ಮಾಜಿ ಸಂಸದ ಅಜಯಕುಮಾರ್ ಸಾರ್ ನಾಯಕ್, ಮಾನಿ ಶಾಸಕ ಡಿ.ಆರ್. ಪಾಟೀಲ್, ಮಾಜಿ‌ ಸಚಿವರಾದ ವೀರಕುಮಾರ ಪಾಟೀಲ್, ಬಿ. ಶಿವರಾಮ್, ಮಾಜಿ ಸಚಿವರು, ಎಚ್. ಆಂಜನೇಯ, ರಾಣಿ ಸತೀಶ್ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಸಯೀದ್ ಅಹಮದ್ ಇದ್ದಾರೆ.



Join Whatsapp