Paris Olympics: ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟ ಮನು ಭಾಕರ್: ಶೂಟಿಂಗ್‌ನಲ್ಲಿ ಕಂಚು

Prasthutha|

- Advertisement -

ಪ್ಯಾರಿಸ್‌: ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತದ ಶೂಟಿಂಗ್ ಸೆನ್ಸೇಶನ್ ಮನು ಭಾಕರ್ ಕಂಚಿನ ಪದಕವನ್ನು ಗೆದ್ದು ಇತಿಹಾಸ ಬರೆದಿದ್ದಾರೆ.

ಈ ಮೂಲಕ ಪ್ಯಾರಿಸ್‌ ಒಲಿಂಪಿಕ್ಸ್‌ ಪದಕ ಪಟ್ಟಿಯಲ್ಲಿ ಭಾರತ ಖಾತೆ ತೆರೆದಿದೆ.

- Advertisement -

ಫೈನಲ್‌ನಲ್ಲಿ ಕೊರಿಯಾದ ಶೂಟರ್‌ಗಳ ಎದುರು ಹಿನ್ನಡೆ ಅನುಭವಿಸಿದರೂ, ಕಂಚಿನ ಪದಕಕ್ಕೆ ಕೊರಳೊಡ್ಡುವಲ್ಲಿ ಮನು ಭಾಕರ್‌ ಸಫಲರಾದರು.

ಕೇವಲ 0.1 ಅಂಕಗಳಿಂದ ಅವರು ಬೆಳ್ಳಿ ಪದಕವನ್ನು ತಪ್ಪಿಸಿಕೊಂಡರು. ಆದರೂ ಕಂಚನ್ನು ಗೆಲ್ಲುವಲ್ಲಿ ಯಶಸ್ವಿಯಾದರು. ತೀವ್ರ ಟೀಕೆಗಳನ್ನು ಎದರುಸಿದ್ದ 22 ವರ್ಷ ಮನು ಭಾಕರ್, ಎಲ್ಲವನ್ನೂ ಮೆಟ್ಟಿ ನಿಂತು ಶೂಟಿಂಗ್‌ನಲ್ಲಿ ಮೊದಲ ಪದಕ ಗೆದ್ದ ಭಾರತೀಯ ಮಹಿಳೆ ಎನಿಸಿಕೊಂಡಿದ್ದಾರೆ.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವಲ್ಲಿ ವಿಫಲವಾಗಿದ್ದ ಮನು ಭಾಕರ್, ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಈ ಮೂಲಕ ತಮ್ಮ ವಿರುದ್ಧದ ಟೀಕೆಗಳಿಗೆ ಉತ್ತರ ಕೊಟ್ಟಿದ್ದಾರೆ.



Join Whatsapp