ಬೆಂಗಳೂರು ಮಾಂಸ ಪ್ರಕರಣ: 9 ಹೋಟೆಲ್‌ ಮಾಲೀಕರಿಗೆ ನೋಟಿಸ್

Prasthutha|

- Advertisement -

ಬೆಂಗಳೂರು: ಬೆಂಗಳೂರಿನ ಮಾಂಸ ಪ್ರಕರಣಕ್ಕೆ ಸಂಬಂಧಿಸಿ ಕಳಪೆ ಮಾಂಸ ದಂಧೆ ಆರೋಪ ಉದ್ಯಮಿ ಅಬ್ದುಲ್ ರಜಾಕ್‌ರಿಂದ ಮಾಂಸ ಪಡೆಯುತ್ತಿದ್ದ 9 ಹೋಟೆಲ್‌, ರೆಸ್ಟೋರೆಂಟ್‌ ಹೋಟೆಲ್ ಮಾಲೀಕರಿಗೆ ವಿಚಾರಣೆಗೆ ಹಾಜರಾಗುವಂತೆ ಆಹಾರ ಇಲಾಖೆಯ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.

ಇನ್ನೊಂದೆಡೆ ಪೊಲೀಸರು
ರೈಲ್ವೇ ಅಧಿಕಾರಿಗಳಿಗೂ ಪತ್ರ ಬರೆದು ಮಾಹಿತಿ ಕೇಳಿದ್ದಾರೆ. ಯಾವ ರೈಲುಗಳಲ್ಲಿ ಎಲ್ಲಿಂದ ಎಷ್ಟು ದಿನಗಳಿಗೊಮ್ಮೆ ಮಾಂಸ ಬರುತ್ತಿತ್ತು? ಎಂಬ ಮಾಹಿತಿಯ ಜೊತೆಗೆ ಮಾಂಸ ಸಾಗಾಟ ಮಾಡುತ್ತಿದ್ದ ರೈಲು ನಿಲುಗಡೆಯಾಗುತ್ತಿದ್ದ ಪ್ಲಾಟ್‌‌ಫಾರ್ಮ್‌‌‌‌ನ ಸಿಸಿಟಿವಿ ದೃಶ್ಯಗಳನ್ನು ನೀಡುವಂತೆಯೂ ಪೊಲೀಸರು ರೈಲ್ವೆ ಅಧಿಕಾರಿಗಳನ್ನು ಕೇಳಿಕೊಂಡಿದ್ದಾರೆ.

- Advertisement -

ಪ್ರಕರಣ ಬೆಳಕಿಗೆ ಬಂದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅಬ್ದುಲ್ ರಜಾಕ್, ನಾನೇ ಮಾಂಸ ತರಿಸುತ್ತಿದ್ದೆ ಎಂದು ಹೇಳಿಕೊಂಡಿದ್ದರು. ಹಾಗಾಗಿ ಅಬ್ದುಲ್ ರಜಾಕ್ ಅವರಿಗೂ ನೋಟಿಸ್ ಕೊಟ್ಟು ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.

ಪುನೀತ್ ಕೆರೆಹಳ್ಳಿಗೆ 14 ದಿನ ಜೈಲು

ನಾಯಿ ಮಾಂಸ ಸಾಗಣೆ ಆರೋಪ ಹೊರಿಸಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ ಶಾಂತಿ ಭಂಗ‌ ಉಂಟುಮಾಡಿರುವ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಪುನೀತ್ ಕೆರೆಹಳ್ಳಿ ಜೈಲು‌ಸೇರಿದ್ದಾನೆ. 5ನೇ ಎಸಿಜೆಎಂ ನ್ಯಾಯಾಧೀಶರು ಪುನೀತ್‌ ಕೆರೆಹಳ್ಳಿಗೆ 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದ್ದಾರೆ.



Join Whatsapp