“ಪರಶುರಾಮ ಪ್ರತಿಮೆ ಪ್ರಕರಣದಲ್ಲಿ ಸುನಿಲ್ ಕುಮಾರ್
ಶಾಸಕ ಸ್ಥಾನಕ್ಕೆ ರಾಜೀನಾಮೆ
ನೀಡುವ ಪರಿಸ್ಥಿತಿ ಬರುತ್ತದೆ”
ಮಂಗಳೂರು: ಬೋವಿ ಅಭಿವೃದ್ಧಿ ನಿಗಮದ 100 ಕೋಟಿ ರೂ. ಹಗರಣದಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೋಟಾ ಶ್ರೀನಿವಾಸ ಪೂಜಾರಿ ಭಾಗಿಯಾಗಿದ್ದಾರೆ ಎಂದು ಎಂಎಲ್ಸಿ ಐವನ್ ಡಿಸೋಜ ಆರೋಪಿಸಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ಮಾತನಾಡಿದ ಅವರು, ಕೋಟಾ ಅವರು ಸಚಿವರಾಗಿದ್ದಾಗ ವಿವೇಚನಾ ಕೋಟಾದ ಹಣವನ್ನು ಯಾವುದೋ ಬೋಗಸ್ ಕಂಪೆನಿಗಳಿಗೆ ನೀಡಿ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದರು.
ಅಂದು ಸಚಿವ ಸ್ಥಾನದ ಜೊತೆಗೆ ಭೋವಿ ನಿಗಮದ ಮುಖ್ಯಸ್ಥರಾಗಿದ್ದ ಕೋಟಾ ಪೂಜಾರಿ, ಭೋವಿ ನಿಗಮದಲ್ಲಿ ಹಗರಣ ಆಗಿರುವುದನ್ನು ಸದನದಲ್ಲಿ ಒಪ್ಪಿಕೊಂಡಿದ್ದರು. ಇಂದು ಸಿದ್ದರಾಮಯ್ಯ ರಾಜೀನಾಮೆ ಕೇಳುವ ಕೋಟಾ ಶ್ರೀನಿವಾಸ್ ಪೂಜಾರಿಯವರು ಅಂದು ಯಾಕೆ ರಾಜೀನಾಮೆ ನೀಡಿರಲಿಲ್ಲ ಎಂದು ಐವನ್ ಪ್ರಶ್ನಿಸಿದರು.
ಧರ್ಮದ ಭಯ ಭಕ್ತಿ ಬಗ್ಗೆ ಮಾತನಾಡುವವರು
ಪರಶುರಾಮನ ಮೂರ್ತಿಯನ್ನೇ ಪೈಬರ್‌ನಲ್ಲಿ ಮಾಡಿಬಿಟ್ಟಿದ್ದಾರೆ.
ಪರಶುರಾಮ ಮೂರ್ತಿಯಲ್ಲಿ ಶಾಸಕ ಸುನಿಲ್ ಕುಮಾರ್ ಲೂಟಿ ಹೊಡೆದಿದ್ದಾರೆ ಎಂದು ಅವರು ಅಪಾದಿಸಿದರು.
ಈ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದ್ದು ಮುಂದಿನ 2-3 ತಿಂಗಳಿನಲ್ಲಿ ಸುನಿಲ್‌ಕುಮಾರ್ ಕಾರ್ಕಳದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಪರಿಸ್ಥಿತಿ ಬರಲಿದೆ ಎಂದರು. ಸುನಿಲ್ ಕುಮಾರ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ತನಕ ಕಾಂಗ್ರೆಸ್ ಹೋರಾಟ ಮಾಡಲಿದೆ ಎಂದರು.