ಗಾಝಾ ವಿರುದ್ಧದ ಇಸ್ರೇಲ್ ದಾಳಿಗಳನ್ನು ಖಂಡಿಸುವುದು ಪ್ರತಿಯೊಬ್ಬರ ನೈತಿಕ ಜವಾಬ್ದಾರಿ: ಪ್ರಿಯಾಂಕ ಗಾಂಧಿ

Prasthutha|

ನವದೆಹಲಿ: ಕಳೆದ ಹತ್ತು ತಿಂಗಳಿನಿಂದ ನಡೆಯುತ್ತಿರುವ ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ದಾಳಿಯಲ್ಲಿ ಸುಮಾರು 40,000 ಜನರು ಸಾವಿಗೀಡಾಗಿದ್ದಾರೆ‌. ಇಸ್ರೇಲ್ ನಡೆಯುತ್ತಿರುವ ಜನಾಂಗೀಯ ಹತ್ಯೆಯ ಕ್ರಮಗಳನ್ನು ಖಂಡಿಸುವುದು ಪ್ರತಿಯೋಬ್ಬರ ಮಾನವರ ಕರ್ತವ್ಯವಾಗಿದೆ. ದಾಳಿಗಳನ್ನು ನಿಲ್ಲಿಸುವಂತೆ ಇಸ್ರೇಲ್‌ಗೆ ಒತ್ತಡ ಹೇರಲು ಜಾಗತಿಕ ಸಮುದಾಯ ಮುಂದಾಗಬೇಕು ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಒತ್ತಾಯಿಸಿದ್ದಾರೆ.

- Advertisement -

X ಪೋಸ್ಟ್ ಮಾಡಿರುವ ಅವರು, ಅಮೆರಿಕ ಸಂಸತ್‌ನಲ್ಲಿ ಮಾಡಿದ ಭಾಷಣದಲ್ಲಿ ಗಾಝಾ ಮೇಲಿನ ದಾಳಿಗಳನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸಮರ್ಥಿಸಿಕೊಂಡಿದ್ದಾರೆ. ಇದು ಖಂಡನೀಯ ಎಂದರು.

ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹುಗೆ ಅಮೆರಿಕ ಸಂಸತ್​ನಲ್ಲಿ ಎದ್ದು ನಿಂತು ಚಪ್ಪಾಳೆ ತಟ್ಟುತ್ತಿದ್ದಾರೆ. ನಾಗರಿಕತೆ ಮತ್ತು ಅನಾಗರಿಕತೆ ನಡುವಿನ ಘರ್ಷಣೆ ಎಂದು ನೆತನ್ಯಾಹು ಹೇಳಿದ್ದಾರೆ. ಅವರು ಹೇಳುತ್ತಿರುವುದು ನಿಜ. ನೆತಹ್ಯಾವು ಮತ್ತು ಅವರ ಸರ್ಕಾರದ ಬರ್ಬರತೆಗೆ ಹೆಚ್ಚಿನ ಪಾಶ್ಚಿಮಾತ್ಯ ರಾಷ್ಟ್ರಗಳು ಬೆಂಬಲ ನೀಡುತ್ತಿವೆ. ಇದು ನಿಜಕ್ಕೂ ನಾಚಿಗೇಡಿನ ಸಂಗತಿ ಎಂದು ಪ್ರಿಯಾಂಕಾ ಪೋಸ್ಟ್ ಮಾಡಿದ್ದಾರೆ.

- Advertisement -

ದ್ವೇಷ ಮತ್ತು ಹಿಂಸಾಚಾರದಲ್ಲಿ ನಂಬಿಕೆಯಿಲ್ಲದ ಇಸ್ರೇಲಿ ನಾಗರಿಕರು ಹಾಗೂ ಜಗತ್ತಿನ ಪ್ರತಿ ಸರ್ಕಾರ ಸೇರಿದಂತೆ ಇಸ್ರೇಲಿ ಸರ್ಕಾರ ಕೃತ್ಯವನ್ನು ಖಂಡಿಸುವುದು ಪ್ರತಿಯೊಬ್ಬ ವ್ಯಕ್ತಿಯ ನೈತಿಕ ಜವಾಬ್ದಾರಿಯಾಗಿದೆ. ನಾಗರಿಕತೆ ಮತ್ತು ನೈತಿಕತೆಯನ್ನು ಪ್ರತಿಪಾದಿಸುವ ಜಗತ್ತಿನಲ್ಲಿ ಅವರ ಕ್ರಮಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ಪ್ರಿಯಾಂಕಾ ಗಾಂಧಿ ಆಕ್ರೋಶ ವ್ಯಕ್ತಪಡಿಸಿದರು.

ಗಾಜಾದಲ್ಲಿ ಇಸ್ರೇಲ್​ ನಡೆಯುತ್ತಿರುವ ಭೀಕರ ನರಮೇಧದಿಂದ ನಾಗರಿಕರು, ತಾಯಂದಿರು, ತಂದೆ, ವೈದ್ಯರು, ದಾದಿಯರು, ಸಹಾಯ ಕಾರ್ಯಕರ್ತರು, ಪತ್ರಕರ್ತರು, ಶಿಕ್ಷಕರು, ಬರಹಗಾರರು, ಕವಿಗಳು, ಹಿರಿಯ ನಾಗರಿಕರು ಮತ್ತು ದಿನದಿಂದ ದಿನಕ್ಕೆ ನಾಶವಾಗುತ್ತಿರುವ ಸಾವಿರಾರು ಮುಗ್ಧ ಮಕ್ಕಳ ಪರವಾಗಿ ಮಾತನಾಡಲು ಇದು ಸಾಕಾಗುವುದಿಲ್ಲ ಎಂದು ಹೇಳಿದರು.



Join Whatsapp