ಇಂದು ಮೋದಿ 3.0 ಸರ್ಕಾರದ ಮೊದಲ ಬಜೆಟ್ ಮಂಡನೆ

Prasthutha|

ನವದೆಹಲಿ: ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡಲಿದ್ದಾರೆ. ಫೆಬ್ರುವರಿಯಲ್ಲಿ ನಡೆದ ಮಧ್ಯಂತರ ಬಜೆಟ್ ಸೇರಿ ನಿರ್ಮಲಾ ಸೀತಾರಾಮನ್‌ಗೆ ಇದು ಸತತ ಏಳನೇ ಬಜೆಟ್ ಮಂಡನೆಯಾಗಿದೆ.

- Advertisement -

2024-25ರ ಹಣಕಾಸು ವರ್ಷದ ಈ ಪೂರ್ಣ ಬಜೆಟ್ ಮಂಡನೆಯನ್ನು ನಿರ್ಮಲಾ ಸೀತಾರಾಮನ್ ,ಇಂದು ಪೂರ್ವಾಹ್ನ ಬೆಳಗ್ಗೆ 11 ಗಂಟೆಗೆ ಆರಂಭಿಸಲಿದ್ದಾರೆ.

ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಭಾಷಣ ಎರಡರಿಂದ ಮೂರು ಗಂಟೆ ಅವಧಿ ಇರುವ ನಿರೀಕ್ಷೆ ಇದೆ. ಮಧ್ಯಂತರ ಬಜೆಟ್​ನಲ್ಲಿ ಅವರ ಭಾಷಣ 87 ನಿಮಿಷಗಳಷ್ಟು ಮಾತ್ರ ಇತ್ತು. 2020ರ ಬಜೆಟ್​ನ ಭಾಷಣ 160 ನಿಮಿಷ, ಅಂದರೆ 2 ಗಂಟೆ 40 ನಿಮಿಷದಷ್ಟು ಸುದೀರ್ಘ ಇತ್ತು. ಮಧ್ಯಾಹ್ನ ಎರಡು ಗಂಟೆಯವರೆಗೂ ಈ ಬಾರಿಯ ಬಜೆಟ್ ಭಾಷಣ ಇರಬಹುದೆಂದು ನಿರೀಕ್ಷಿಸಲಾಗಿದೆ.

- Advertisement -

ಮೋದಿ 3.0 ಸರ್ಕಾರದ ಮೊದಲ ಬಜೆಟ್ ಇದಾಗಿದ್ದು, ಸಾಕಷ್ಟು ಕುತೂಹಲ ಇದೆ.

ಸೋಮವಾರ 522 ಪುಟಗಳ ಆರ್ಥಿಕ ಸಮೀಕ್ಷೆಯನ್ನು ವಿತ್ತ ಸಚಿವೆ ಮಂಡನೆ ಮಾಡಿದ್ದು, ಬಜೆಟ್​ ಮೇಲೆ ಸಹಜವಾಗಿ ನಿರೀಕ್ಷೆ ಕೂಡ ಇಡಲಾಗಿದೆ. ಪಿಎಂ ಕಿಸಾನ್ ಸಮ್ಮಾನ್​​ ಯೋಜನೆ ಸಹಾಯಧನವನ್ನು 6 ಸಾವಿರದಿಂದ 8 ಸಾವಿರಕ್ಕೆ ಹೆಚ್ಚಿಸಲು ರೈತರ ಒತ್ತಾಯವಿದೆ. ಅದರೊಂದಿಗೆ ಸೆಕ್ಷನ್​ 80C ಅಡಿ ತೆರಿಗೆ ವಿನಾಯಿತಿ ಮಿತಿ ಹೆಚ್ಚಳಕ್ಕೆ ಬೇಡಿಕೆ ಇಡಲಾಗಿದೆ. ಎಲೆಕ್ಟ್ರಿಕ್​ ವಾಹನಗಳ ಉತ್ಪಾದನೆ ಹೆಚ್ಚಿಸಲು ಸಬ್ಸಿಡಿ ನಿರೀಕ್ಷೆ ಮಾಡಲಾಗಿದೆ. 8ನೇ ವೇತನ ಆಯೋಗ ಜಾರಿಗೆ ನೌಕರರ ಡಿಮ್ಯಾಂಡ್ ಮಾಡಿದ್ದಾರೆ. ಮೇಕೆದಾಟು ಯೋಜನೆ, ಕಳಸಾ ಬಂಡೂರಿ ಯೋಜನೆ, ಎತ್ತಿನಹೊಳೆ ಯೋಜನೆ ಮುಂತಾದ ಮಹತ್ವಾಕಾಂಕ್ಷಿ ಯೋಜನೆಗಳಿಗೆ ನೇರ ಅಥವಾ ಪರೋಕ್ಷವಾಗಿ ಸಹಾಯ ಮಾಡಬಲ್ಲ ನಿಲುವುಗಳನ್ನು ಬಜೆಟ್‌ನಲ್ಲಿ ಪ್ರಸ್ತಾವಿಸಬಹುದೇ ಎಂಬ ನಿರೀಕ್ಷೆ‌ಯೂ ಇದೆ.

2024ರ ಕೇಂದ್ರ ಬಜೆಟ್ ಭಾಷಣ ಮಂಡನೆ ಹಲವೆಡೆ ಲೈವ್ ಆಗಿ ಪ್ರಸಾರ ಆಗಲಿದೆ. ಕೇಂದ್ರ ಸರ್ಕಾರದಿಂದ ನಿರ್ವಹಿಸಲಾಗುವ ಸಂಸದ್ ಟಿವಿ ಮತ್ತು ದೂರದರ್ಶನ್ ಟಿವಿ ವಾಹಿನಿಗಳಲ್ಲಿ ನೇರ ಪ್ರಸಾರ ಇರುತ್ತದೆ. ಈ ವಾಹಿನಿಗಳ ಯೂಟ್ಯೂಬ್ ಚಾನಲ್​ಗಳಲ್ಲೂ ನೇರ ಪ್ರಸಾರ ಇರುತ್ತದೆ. ಇಂಡಿಯಾ ಬಜೆಟ್ ವೆಬ್​ಸೈಟ್​ನಲ್ಲೂ ಲೈವ್ ಸ್ಟ್ರೀಮ್ ಇರುತ್ತದೆ.



Join Whatsapp