ಪ್ರಯಾಣಿಕರ ಗಮನಕ್ಕೆ: ಮಂಗಳೂರು- ಬೆಂಗಳೂರು ಎಲ್ಲಾ ಮಾರ್ಗಗಳು ಭಾಗಶಃ ಬಂದ್

Prasthutha|

ಮಂಗಳೂರು: ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮಳೆ ಧಾರಾಕಾರ ಸುರಿಯುತ್ತಿದೆ. ಹಲವೆಡೆ ರಸ್ತೆಗಳು ಜಲಾವೃತವಾಗಿವೆ. ಈ ಹಿನ್ನೆಲೆಯಲ್ಲಿ ಹಲವು ಗ್ರಾಮಗಳ ಸಂಪರ್ಕ ಕಡಿತವಾಗಿದೆ. ಅದರಂತೆ ಮಂಗಳೂರು ಟು ಬೆಂಗಳೂರು ಮಾರ್ಗ ರಸ್ತೆಗಳು ಸಹ ಬಂದ್ ಆಗಿವೆ.

- Advertisement -

ಬೆಂಗಳೂರಿನಿಂದ ಮಂಗಳೂರಿಗೆ ತೆರಳಬೇಕಾದರೆ ಚಾರ್ಮಾಡಿ ಘಾಟ್, ಶಿರಾಡಿಘಾಟ್ ಮತ್ತು ಮಡಿಕೇರಿಯ ಸಂಪಾಜೆ ಘಾಟ್ ಮೂಲಕ ಹೋಗಬೇಕು. ಆದರೆ, ಇದೀಗ ಈ ಮಾರ್ಗಗಳಲ್ಲಿ ಗುಡ್ಡ ಕುಸಿಯುವ ಭೀತಿ ಇರುವುದರಿಂದ ಈ ಮಾರ್ಗಗಳನ್ನು ಬಂದ್ ಮಾಡಲಾಗಿದೆ.


ಚಾರ್ಮಾಡಿ ಘಾಟ್ ಮೂಲಕ ಬೆಂಗಳೂರಿನಿಂದ ಮಂಗಳೂರಿಗೆ ಹೋಗಬಹುದು. ಆದ್ರೆ, ಈ ಘಾಟ್ ನಲ್ಲಿ ಭಾರೀ ವಾಹನ ಸಂಚರಿಸುವಂತಿಲ್ಲ. ಇನ್ನು ಕಾರು, ಕೆಎಸ್ ಆರ್ ಟಿಸಿ ಬಸ್ ಗಳು ಹೋಗಬಹುದು. ಆದರೆ ಭಾರೀ ಮಳೆ ಸುರಿಯುತ್ತಿದ್ದರಿಂದ ಈ ರಸ್ತೆಯಲ್ಲಿ ರಾತ್ರಿ ಪ್ರಯಾಣ ಅಷ್ಟು ಸೂಕ್ತವಾಗಿಲ್ಲ.

- Advertisement -


ಇನ್ನು ರಾಷ್ರೀಯ ಹೆದ್ದಾರಿ 275ರ ಸಂಪಾಜೆಯಿಂದ ಮಡಿಕೇರಿ ನಡುವೆ ತೀವ್ರ ಮಳೆಯಿಂದಾಗಿ ರಸ್ತೆ ಬದಿ ಗುಡ್ಡ ಕುಸಿಯುವ ಸಾಧ್ಯತೆ ಇದ್ದು, ಸಾರ್ವಜನಿಕರ ಹಿತಾಸಕ್ತಿಯಿಂದ ಈ ಭಾಗದಲ್ಲಿ ಜುಲೈ 18ರಿಂದ 22ರ ವರೆಗೆ ಪ್ರತಿ ದಿನ ರಾತ್ರಿ 8 ರಿಂದ ಮರದಿನ ಬೆಳಿಗ್ಗೆ 6 ಗಂಟೆ ವರೆಗೆ ಎಲ್ಲಾ ವಾಹನಗ ಸಂಚಾರ ನಿರ್ಬಂಧಿಸಲಾಗಿದೆ.



Join Whatsapp