ಉತ್ತರ ಪ್ರದೇಶ ಬಿಜೆಪಿಯಲ್ಲಿ ಬಿರುಕು?: ಸಿಎಂ ಆದಿತ್ಯನಾಥ್ -ಡಿಸಿಎಂ ಕೇಶವ್ ಮೌರ್ಯ ನಡುವೆ ಭಿನ್ನಾಭಿಪ್ರಾಯ

Prasthutha|

►ನಡ್ಡಾ ಭೇಟಿಯಾದ ಡಿಸಿಎಂ ಕೇಶವ್ ಮೌರ್ಯ

- Advertisement -

ನವದೆಹಲಿ: ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಮಂಗಳವಾರ ದೆಹಲಿಯಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ.


ಇತ್ತೀಚಿಗಿನ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿಯ ನಿರಾಶಾದಾಯಕ ನಿರ್ವಹಣೆಯ ಕುರಿತಾದ ಅಸಮಾಧಾನ ಹಾಗೂ ರಾಜ್ಯದ ಮುಖ್ಯಮಂತ್ರಿ ಆದಿತ್ಯನಾಥ್ ಅವರೊಂದಿಗೆ ಒಡಕು ಉಂಟಾಗಿದೆ ಎಂಬ ವರದಿಗಳ ನಡುವೆ ಇವರ ಈ ಭೇಟಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

- Advertisement -


ಸಭೆಯಲ್ಲಿ ಪಕ್ಷ ಹಾಗೂ ಉತ್ತರ ಪ್ರದೇಶ ಸರ್ಕಾರದ ನಡುವೆ ಇರುವ ಉದ್ವಿಗ್ನತೆ ಕಡಿಮೆಗೊಳಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎನ್ನಲಾಗಿದೆ. ರಾಜ್ಯದ ಹಲವು ಬಿಜೆಪಿ ಮುಖಂಡರು ಆದಿತ್ಯನಾಥ್ ಸರ್ಕಾರದ ಕಾರ್ಯವೈಖರಿಯಿಂದ ಅಸಂತುಷ್ಟಗೊಂಡಿದ್ದಾರೆ ಎಂದು ಈಗಾಗಲೇ ಹಲವು ವರದಿಗಳು ಉಲ್ಲೇಖಿಸಿವೆ.


ಈ ಮಧ್ಯೆ ಆದಿತ್ಯನಾಥ್ ಇಂದು ತಮ್ಮ ಉಸ್ತುವಾರಿ ಸಚಿವರೊಂದಿಗೆ ಸಭೆ ನಡೆಸಿದರು. ರಾಜ್ಯದ ಹತ್ತು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ ಪ್ರಾಮಾಣಿಕ ಮತ್ತು ಗೆಲ್ಲಬಹುದಾದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು ಮತ್ತು ಸಾರ್ವಜನಿಕರೊಂದಿಗಿನ ಅವರ ಚಿತ್ರಣ ಮತ್ತು ಸಂಪರ್ಕಕ್ಕೆ ಆದ್ಯತೆ ನೀಡಲಾಗುವುದು ಎಂದು ಹೇಳಿದ್ದಾರೆ.



Join Whatsapp