ದಕ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು, ಆಸ್ಪತ್ರೆಗಾಗಿ ಹೋರಾಟ: WIM ಬೆಂಬಲ

Prasthutha|

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಂಜೂರಾತಿ ಆಗ್ರಹಿಸಿ ಕಳೆದ ಒಂದು ವಾರದಿಂದ ನಡೆಯುತ್ತಿರುವ ಜನಪರ ಹೋರಾಟಕ್ಕೆ ವಿಮೆನ್ ಇಂಡಿಯಾ ಮೂಮೆಂಟ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಸಂಪೂರ್ಣ ಬೆಂಬಲ ವ್ಯಕ್ತ ಪಡಿಸಿದೆ.

- Advertisement -

ಈ ಹೋರಾಟದ ಭಾಗವಾಗಿ ನಡೆಯುತ್ತಿರುವ ಭಿತ್ತಿಪತ್ರ ಪ್ರದರ್ಶನ, ಪ್ರತಿಭಟನೆ, ಮುಖ್ಯ ಮಂತ್ರಿಯರಿಗೆ ಪತ್ರ, ಕಾರ್ಡ್ ಚಳವಳಿ ಸೇರಿದಂತೆ ವಿಭಿನ್ನ ರೀತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಜನತೆ ನಡೆಸಲು ಉದ್ದೇಶಿಸಿರುವ ಎಲ್ಲಾ ಹೋರಾಟಗಳಲ್ಲೂ ವಿಮೆನ್ ಇಂಡಿಯಾ ಮೂಮೆಂಟ್ ಭಾಗವಹಿಸಿದೆ. ಮುಂದೆಯೂ ನಮ್ಮ ಕಾರ್ಯಕರ್ತರು ಈ ಜನಪರ ಹೋರಾಟದಲ್ಲಿ ಭಾಗವಹಿಸಬೇಕೆಂದು ವಿಮೆನ್ ಇಂಡಿಯಾ ಮೂಮೆಂಟ್ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಶಾ ವಾಮಂಜೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



Join Whatsapp