ಮೇಕೆ ಮೇಯಿಸಲು ಹೋಗಿದ್ದ ಗಂಡ,ಹೆಂಡತಿಗೆ ರೈಲು ಡಿಕ್ಕಿ: ಸ್ಥಳದಲ್ಲೇ ಇಬ್ಬರು ಮೃತ

Prasthutha|

ದೊಡ್ಡಬಳ್ಳಾಪುರ: ರೈಲ್ವೆ ಹಳಿ ಮೇಲೆ ಮೇಕೆಗಳನ್ನು ಮೇಯಿಸುತ್ತಿದ್ದ ದಂಪತಿ ರೈಲಿಗೆ ಸಿಕ್ಕಿಹಾಕಿಕೊಂಡು ಪ್ರಾಣ ಕಳಕೊಂಡ ದುರಂತ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಕೆಳಗಿನ ನಾಯಕರಂಡಹಳ್ಳಿಯಲ್ಲಿ ನಡೆದಿದೆ.

- Advertisement -

ಗ್ರಾಮದ ಚಂದ್ರ ನಾಯಕ್ ಮತ್ತು ಜಯಬಾಯಿ ಮೃತ ದಂಪತಿ.

ಮೇಕೆ ಮೇಯಿಸಲು ಹೋಗಿದ್ದ ವೇಳೆ ಗಂಡ ರೈಲ್ವೆ ಹಳಿ ಮೇಲೆ ಹೋಗಿದ್ದರು. ಈ ವೇಳೆ ರೈಲು ಬರುತ್ತಿದ್ದುದನ್ನು ಕಂಡು ಕಂಡು ಪತ್ನಿ ಗಂಡನ ರಕ್ಷಣೆಗೆ ಧಾವಿಸಿದ್ದರು. ವೇಗವಾಗಿ ಬಂದ ರೈಲು ಇಬ್ಬರಿಗೂ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮೇಲಕ್ಕೆ ಹಾರಿ ಕೆಳಕ್ಕೆ ಬಿದ್ದ ಇಬ್ಬರೂ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

- Advertisement -

ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಯಶವಂತಪುರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



Join Whatsapp