ಸಂವಿಧಾನ್ ಹತ್ಯಾ ದಿವಸ್ ಘೋಷಣೆ ಸರಿಯಲ್ಲ: ಶಶಿ ತರೂರ್

Prasthutha|

ನವದೆಹಲಿ: ಇಂದಿರಾ ಗಾಂಧಿ ಸರ್ಕಾರ ತುರ್ತು ಪರಿಸ್ಥಿತಿಯನ್ನು ಹೇರಿದ ನೆನಪಿಗಾಗಿ ಜೂನ್ 25 ಅನ್ನು ‘ಸಂವಿಧಾನ್ ಹತ್ಯಾ ದಿವಸ್’ ಎಂದು ಘೋಷಿಸಿದ್ದನ್ನು ಕಾಂಗ್ರೆಸ್ ಮುಖಂಡ ಶಶಿ ತರೂರ್ ಖಂಡಿಸಿದ್ದಾರೆ.

- Advertisement -

ಅಂದಿನ ತುರ್ತುಪರಿಸ್ಥಿತಿ ಘೋಷಣೆ ದಿನವನ್ನು ಸಂವಿಧಾನ್ ಹತ್ಯಾ ದಿವಸ್ ಎಂದು ಘೋಷಿಸುವುದು ಸ್ವಲ್ಪ ವಿಲಕ್ಷಣವಾಗಿದೆ. ಯಾವುದೇ ಹತ್ಯಾ (ಕೊಲೆ) ಸಂಭವಿಸಿಲ್ಲ. ಅದು ಅಸಂವಿಧಾನಿಕವೂ ಆಗಿರಲಿಲ್ಲ ಎಂದು ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಅಂದಿನ‌ ತುರ್ತುಪರಿಸ್ಥಿತಿ ಘೋಷಣೆ ಸಂಪೂರ್ಣವಾಗಿ ಸಂವಿಧಾನದ ನಿಬಂಧನೆಗಳಿಗೆ ಅನುಗುಣವಾಗಿತ್ತು ಎಂದು ತಿರುವನಂತಪುರ ಸಂಸದ ಶಶಿ ತರೂರ್ ಹೇಳಿದರು.

- Advertisement -

ಜೂನ್‌ನಲ್ಲಿ ಪ್ರಕಟವಾದ ಹಿಂದೂಸ್ತಾನ್ ಟೈಮ್ಸ್ ಲೇಖನವನ್ನು ಹಂಚಿಕೊಂಡ ತರೂರ್, ವಿರೋಧ ಪಕ್ಷದ ರಾಜಕಾರಣಿಗಳನ್ನು ಬಂಧಿಸುವುದು, ಮಾಧ್ಯಮಗಳನ್ನು ಸೆನ್ಸಾರ್ ಮಾಡುವುದು ಮತ್ತು ಆ ಅವಧಿಯಲ್ಲಿ ತೆಗೆದುಕೊಂಡ ಹಲವಾರು ಕ್ರಮಗಳು ಪ್ರಜಾಪ್ರಭುತ್ವ ವಿರೋಧಿ ಎಂದು ನಾನು ಭಾವಿಸುತ್ತೇನೆ.ಆದರೆ ಅಸಂವಿಧಾನಿಕವಲ್ಲ ಎಂದು ಪ್ರತಿಪಾದಿಸಿದರು.



Join Whatsapp