ದೇಶದ ಮೂಲಭೂತ ಆರ್ಥಿಕ ಸಮಸ್ಯೆಗಳತ್ತ ಗಮನಹರಿಸಿ: ಪ್ರಧಾನಿಗೆ ಖರ್ಗೆ ಮನವಿ

Prasthutha|

ನವದೆಹಲಿ: ದೇಶದ ಮೂಲಭೂತ ಆರ್ಥಿಕ ಸಮಸ್ಯೆಗಳತ್ತ ಗಮನಹರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮನವಿ ಮಾಡಿದ್ದಾರೆ.
ಈ ಕುರಿತು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ಕಳೆದ 10 ವರ್ಷಗಳಲ್ಲಿ ಜನರ ಮೂಲಭೂತ ಸಮಸ್ಯೆಗಳಿಂದ ಸರ್ಕಾರ ಪಲಾಯನ ಮಾಡಲು ‘ಪಿಆರ್’ ಅನ್ನು ಚೆನ್ನಾಗಿ ಬಳಸಿದ್ದೀರಿ. ಆದರೆ ಮುಂದೆ ಹೀಗಾಗುವುದಿಲ್ಲ. ಜನರು ಉತ್ತರವನ್ನು ಬಯಸುತ್ತಿದ್ದಾರೆ’ ಎಂದು ಅವರು ಹೇಳಿದ್ದಾರೆ.

- Advertisement -


ಮುಂಬರುವ ಕೇಂದ್ರ ಬಜೆಟ್ ಗಾಗಿ ಕ್ಯಾಮರಾದ ನೆರಳಿನಲ್ಲಿ ಸಭೆ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಮೂಲಭೂತ ಆರ್ಥಿಕ ಸಮಸ್ಯೆಗಳತ್ತ ಗಮನ ಹರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.


‘ಪ್ರಧಾನಿ ಮೋದಿ ಅವರ ಸರ್ಕಾರ ಕೋಟ್ಯಂತರ ಜನರ ಬದುಕನ್ನು ಹಾಳು ಮಾಡಿದ್ದು, ನಿರುದ್ಯೋಗ, ಹಣದುಬ್ಬರ ಹಾಗೂ ಅಸಮಾನತೆಯ ಕೂಪಕ್ಕೆ ತಳ್ಳಿಹಾಕಿದೆ. ನಿರುದ್ಯೋಗ ದರ ಶೇ 9.2ರಷ್ಟಿದ್ದು, ಯುವಜನರ ಭವಿಷ್ಯ ಡೋಲಾಯಮಾನವಾಗಿದೆ’ ಎಂದು ಹೇಳಿದ್ದಾರೆ.

- Advertisement -



Join Whatsapp