ಏರ್ ಪೋರ್ಟ್ ನಲ್ಲಿ ಸಿಐಎಸ್ ಎಫ್ ಅಧಿಕಾರಿ ಕೆನ್ನೆಗೆ ಬಾರಿಸಿದ ಸ್ಪೈಸ್ ಜೆಟ್ ಮಹಿಳಾ ಸಿಬ್ಬಂದಿ

Prasthutha|

ಜೈಪುರ: ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸ್ಪೈಸ್ ಜೆಟ್ ಮಹಿಳಾ ಸಿಬ್ಬಂದಿ ಸಿಐಎಸ್ ಎಫ್ ಅಧಿಕಾರಿಗೆ ಕಪಾಳಮೋಕ್ಷ ಮಾಡಿರುವ ಘಟನೆ ವರದಿಯಾಗಿದೆ.

- Advertisement -


ಸ್ಪೈಸ್ ಜೆಟ್ ನ ಆಹಾರ ಮೇಲ್ವಿಚಾರಕಿ ಅನುರಾಧಾ ರಾಣಿ ಅವರನ್ನು ಜೈಪುರ ವಿಮಾನ ನಿಲ್ದಾಣದ ಗೇಟ್ ನಲ್ಲಿ ಸಹಾಯಕ ಸಬ್ ಇನ್ಸ್ ಪೆಕ್ಟರ್ ಗಿರಿರಾಜ್ ಪ್ರಸಾದ್ ಅವರು ಬೆಳಗಿನ ಜಾವ 4 ಗಂಟೆ ಸುಮಾರಿಗೆ ತಡೆದರು. ವಾಹನದ ಗೇಟ್ ಬಳಸಲು ಅನುಮತಿ ಇಲ್ಲ ಎಂದು ಹೇಳಿದ್ದಾರೆ.


ಮತ್ತೊಂದು ಗೇಟ್ ಮೂಲಕ ಹೊರಹೋಗುವಂತೆ ವಿಮಾನಯಾನ ನೌಕರರನ್ನು ಕೇಳಿದಾಗ ಅವರು ಭದ್ರತಾ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ಪೊಲೀಸರು ಮತ್ತು ಸಿಐಎಸ್ ಎಫ್ ಅಧಿಕಾರಿಗಳು ತಿಳಿಸಿದ್ದಾರೆ.

- Advertisement -


ನಂತರ, ಅನುರಾಧಾ ರಾಣಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್ಎಸ್) ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ಪ್ರಸ್ತುತ ತನಿಖೆ ನಡೆಯುತ್ತಿದೆ.

ಈ ಪ್ರಕರಣದಲ್ಲಿ, ಸ್ಪೈಸ್‌ ಜೆಟ್ ತನ್ನ ಉದ್ಯೋಗಿಗಳನ್ನು ಸಮರ್ಥಿಸಿಕೊಂಡಿದೆ ಮತ್ತು ಅವರಿಗೆ ಲೈಂಗಿಕ ಕಿರುಕುಳ ನೀಡಿದ್ದರು. ಕೆಲಸ ಮುಗಿದ ಮೇಲೆ ಮನೆಗೆ ಬರುವಂತೆ ಕೇಳಿದ್ದಕ್ಕೆ ಕೋಪಗೊಂಡು ಕಪಾಳಮೋಕ್ಷ ಮಾಡಿದ್ದಾರೆ ಎಂದು ಹೇಳಿದ್ದಾರೆ.



Join Whatsapp