ಪೌರತ್ವ ತಿದ್ದುಪಡಿ ಕಾಯ್ದೆ ಅಸಂವಿಧಾನಿಕ: ಸುಪ್ರೀಂಕೋರ್ಟ್ ಮಾಜಿ ನ್ಯಾಯಾಧೀಶ ವಿ. ಗೋಪಾಲ ಗೌಡ

Prasthutha|

ಹೊಸದಿಲ್ಲಿ : ಪೌರತ್ವ ತಿದ್ದುಪಡಿ ಕಾಯ್ದೆ ಅಸಂವಿಧಾನಿಕ ಎಂದು ಸುಪ್ರೀಂಕೋರ್ಟ್ ಮಾಜಿ ನ್ಯಾಯಾಧೀಶ ಜಸ್ಟಿಸ್ ವಿ ಗೋಪಾಲ ಗೌಡ ಹೇಳಿದ್ದಾರೆ. ಹಿರಿಯ ವಕೀಲ ಕೆ.ಎಸ್ ಬರೆದ ಪೌರತ್ವ, ಹಕ್ಕುಗಳು ಮತ್ತು ಸಾಂವಿಧಾನಿಕ ಮಿತಿಗಳು ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಭಾರತದ ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಉಪಸ್ಥಿತರಿದ್ದರು.

- Advertisement -

 1999 ರಲ್ಲಿ ಎಸ್.ಆರ್. ಬೊಮ್ಮಿಯ ಪ್ರಕರಣದಲ್ಲಿ ಸಂಸತ್ತು ಅಥವಾ ರಾಜ್ಯ ಶಾಸಕಾಂಗವು ಧರ್ಮದ ಆಧಾರದ ಮೇಲೆ ಕಾನೂನನ್ನು ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಅಸ್ಸಾಂನ ಅನೇಕ ನಾಗರಿಕರು ತಮ್ಮ ಪ್ರಮಾಣಪತ್ರಗಳನ್ನು ಹೊಂದಿರದ ಕಾರಣ ಅವರ ಪೌರತ್ವವನ್ನು ಸಾಬೀತುಪಡಿಸಲು ಸಾಧ್ಯವಿಲ್ಲ ಎಂದು ಗೋಪಾಲ ಗೌಡ ಹೇಳಿದ್ದಾರೆ.

ಅಸ್ಸಾಂನಲ್ಲಿ ದಶಕಗಳ ಹಿಂದೆ ರಾಜ್ಯಕ್ಕೆ ವಲಸೆ ಬಂದ ಲಕ್ಷಾಂತರ ಜನರಿದ್ದಾರೆ. ಈ ಹಿಂದೆ ಅಸ್ಸಾಂಗೆ ಸತ್ಯ ಶೋಧನಾ ಸಮಿತಿಯ ಅಧ್ಯಕ್ಷರಾಗಿ ಭೇಟಿ ನೀಡಿದಾಗ ಈ ವಿಷಯ ಸ್ಪಷ್ಟವಾಗಿದೆ. ಜನಸಂಖ್ಯೆಯಲ್ಲಿ 50 ಶೇಕಡಾಗಿಂತ ಅಧಿಕ ಅನಕ್ಷರಸ್ಥ ಮತ್ತು ದಾಖಲೆ ರಹಿತರಾಗಿರುವ ಈ ದೇಶದಲ್ಲಿ ಹಲವು ದಶಕಗಳ ನಂತರ ಅವರ ಪೌರತ್ವವನ್ನು ಸಾಬೀತುಪಡಿಸಲು ಸರ್ಕಾರ ದಾಖಲೆಗಳನ್ನು ಕೇಳುತ್ತಿದೆ ಎಂದು ನ್ಯಾಯಮೂರ್ತಿ ವಿ. ಗೋಪಾಲ್ ಗೌಡ ಅವರು ಸರ್ಕಾರದ ಕ್ರಮವನ್ನು ಟೀಕಿಸಿದ್ದಾರೆ. ಅಸ್ಸಾಂನ ಎನ್‌ಆರ್‌ಸಿ ಪಟ್ಟಿಯಲ್ಲಿ ಕನಿಷ್ಠ 1.9 ದಶಲಕ್ಷ ಜನರು ಪೌರತ್ವವನ್ನು ಕಳೆದುಕೊಂಡಿದ್ದಾರೆ ಎಂದು ನ್ಯಾಯಮೂರ್ತಿ ಹೇಳಿದ್ದಾರೆ.



Join Whatsapp