ಬೆಂಗಳೂರು: ‘ನಾನು ನಂದಿನಿ, ಬೆಂಗಳೂರಿಗೆ ಬಂದೀನಿ’ ಹಾಡಿನ ಖ್ಯಾತಿಯ ಹಾಸ್ಯಮಯ ವಿಡಿಯೊಗಳ ಮೂಲಕ ಅಪಾರ ಜನಪ್ರಿಯತೆ ಗಳಿಸಿರುವ ಕಂಟೆಂಟ್ ಕ್ರಿಯೇಟರ್ ‘ವಿಕ್ಕಿಪೀಡಿಯಾ’ ವಿಕಾಸ್ ಅವರನ್ನು ಪೊಲೀಸರು ವಿಚಾರಣೆ ನಡೆಸಿ, ವಾರ್ನಿಂಗ್ ಕೊಟ್ಟಿದ್ದಾರೆ.
ಇತ್ತೀಚೆಗೆ ವಿಕಾಸ್ ತನ್ನ ವಿಡಿಯೋದಲ್ಲಿ ಯುವಜನರು ಹಾಗೂ ಮಾದಕ ವಸ್ತು ಬಗ್ಗೆ ಮಾತನಾಡಿದ್ದರು. ಈ ಕಾರಣದಿಂದ ಬೈಯಪ್ಪನಹಳ್ಳಿ ಪೊಲೀಸರು ಅವರನ್ನು ಠಾಣೆಗೆ ಕರೆಸಿ ಕೆಲವೊಂದು ಎಚ್ಚರಿಕೆ ಕೊಟ್ಟು ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.
ಸಾಮಾಜಿಕ ಜಾಲತಾಣದಲ್ಲಿ ಹಾಸ್ಯಮಯ ವಿಡಿಯೋಗಳಿಂದ ಜನಪ್ರಿಯರಾಗಿರುವ ವಿಕಾಸ್, ʼನಾನು ನಂದಿನಿʼ ಎನ್ನುವ ಹಾಡಿನ ಮೂಲಕ ಇತ್ತೀಚೆಗೆ ಎಲ್ಲೆಡೆ ವೈರಲ್ ಆಗಿದ್ದರು.