BSNLನಿಂದ ಹೊಸ ಭರ್ಜರಿ ಪ್ಲಾನ್ ಬಿಡುಗಡೆ: Jio, Airtelನಿಂದ ಗ್ರಾಹಕರು ವಲಸೆ..!

Prasthutha|

ನವದೆಹಲಿ: ಕಳೆದ ಎರಡು ವರ್ಷದಿಂದ ಬಹುತೇಕ ನಿಷ್ಕ್ರಿಯಗೊಂಡಂತಿದ್ದ ಬಿಎಸ್ ಎನ್ ಎಲ್ ಮರಳಿ ಫಾರ್ಮ್ ಗೆ ಬರುತ್ತಿದೆ. ಸದ್ಯ 3ಜಿ ನೆಟ್ವರ್ಕ್ ಹೊಂದಿರುವ ಬಿಎಸ್ ಎನ್ ಎಲ್ ಸದ್ಯದಲ್ಲೇ ದೇಶಾದ್ಯಂತ 4ಜಿ ನೆಟ್ವರ್ಕ್ ಗೆ ಅಪ್ ಡೇಟ್ ಆಗಲಿದೆ.

- Advertisement -

ಇದರ ಜೊತೆಗೆ ಆಕರ್ಷಕ ಡಾಟಾ ಪ್ಲಾನ್ ಗಳನ್ನು ಬಿಎಸ್ ಎನ್ ಎಲ್ ಬಿಡುಗಡೆ ಮಾಡಿದೆ. ರಿಲಾಯನ್ಸ್ ಜಿಯೋ, ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಸಂಸ್ಥೆಗಳು ಬೆಲೆಗಳನ್ನು ತೀವ್ರವಾಗಿ ಹೆಚ್ಚಳ ಮಾಡಿದ ಬಳಿಕ ಟೆಲಿಕಾಂ ಗ್ರಾಹಕರಿಂದ ವಲಸೆ, ಬಾಯ್ಕಾಟ್ ಟ್ರೆಂಡ್ ಶುರುವಾಗಿದೆ. ಜಿಯೋ ಮತ್ತು ಏರ್ಟೆಲ್ ನಿಂದ ಬಹಳಷ್ಟು ಗ್ರಾಹಕರು ಬಿಎಸ್ ಎನ್ ಎಲ್ ಕಡೆ ಮುಖ ಮಾಡತೊಡಗಿದ್ದಾರೆ.


ಬಿಎಸ್ ಎನ್ ಎಲ್ ತನ್ನ ಎಲ್ಲಾ ಪ್ರೀಪೇಡ್ ಪ್ಲಾನ್ ಗಳನ್ನು ಪರಿಷ್ಕರಿಸಿದೆ. ಅದರಲ್ಲಿ ಗಮನ ಸೆಳೆದದ್ದು 395 ದಿನಗಳ ಒಂದು ಪ್ಲಾನ್. 13 ತಿಂಗಳ ವ್ಯಾಲಿಡಿಟಿ ಇರುವ ಈ ಪ್ಲಾನ್ ಬೆಲೆ ಕೇವಲ 2,399 ರೂ ಮಾತ್ರ. ಅಂದರೆ ತಿಂಗಳಿಗೆ ಸುಮಾರು 184 ರೂ ಮಾತ್ರವೇ. ಈ ಪ್ಲಾನ್ ನಲ್ಲಿ ಗ್ರಾಹಕರು ದಿನಕ್ಕೆ 2ಜಿಬಿಯಷ್ಟು ಹೈಸ್ಪೀಡ್ ಡೇಟಾ ಪಡೆಯುತ್ತಾರೆ. ದಿನಕ್ಕೆ 100 ಎಸ್ಸೆಮ್ಮೆಸ್ ಕಳುಹಿಸುವ ಅವಕಾಶ ಇರುತ್ತದೆ. ಜಿಂಗ್ ಮ್ಯೂಸಿಕ್, ಹಾರ್ಡಿ ಗೇಮ್ಸ್ ಇತ್ಯಾದಿ ವಿವಿಧ ಹೆಚ್ಚುವರಿ ಉಚಿತ ಸರ್ವಿಸ್ ಸಿಗುತ್ತದೆ.

- Advertisement -


ಇತರ ಪ್ರಮುಖ ಪ್ಲಾನ್ ಗಳಲ್ಲಿ 997 ರೂನದ್ದಿದೆ. 160 ದಿನಗಳ ವ್ಯಾಲಿಡಿಟಿಯ ಈ ಪ್ಲಾನ್ ನಲ್ಲಿ ದಿನಕ್ಕೆ 2ಜಿಬಿ ಡಾಟಾ ಸಿಗುತ್ತದೆ. 599 ರೂ ಪ್ಲಾನ್ನಲ್ಲಿ ದಿನಕ್ಕೆ 3ಜಿಬಿ ಡಾಟಾ ಸಿಗಲಿದ್ದು, 84 ದಿನ ವ್ಯಾಲಿಡಿಟಿ ಇದೆ.



Join Whatsapp