ನಾಳೆ ಬೆಳಗ್ಗೆ 11.30ಕ್ಕೆ ಎಸ್ ಎಸ್ ಎಲ್ ಸಿ ಪರೀಕ್ಷೆ-2 ಫಲಿತಾಂಶ

Prasthutha|

ಬೆಂಗಳೂರು: ನಾಳೆ ಬೆಳಗ್ಗೆ 11.30ಕ್ಕೆ ಎಸ್ ಎಸ್ ಎಲ್ ಸಿ ಪರೀಕ್ಷೆ-2ರ ಫಲಿತಾಂಶ ಪ್ರಕಟವಾಗಲಿದೆ.

- Advertisement -

2024ರ ಎಸ್ ಎಸ್ ಎಲ್ ಸಿ ಪರೀಕ್ಷೆ-2ರ ಫಲಿತಾಂಶವನ್ನು ( SSLC Exam-2 Results ದಿನಾಂಕ 10-07-2024ರ ಬೆಳಿಗ್ಗೆ 11.30ಕ್ಕೆ NICಯ ಜಾಲತಾಣ https://karresults.nic.in ನಲ್ಲಿ ಪ್ರಕಟಿಸಲಾಗುತ್ತದೆ ಎಂದುಪತ್ರಿಕಾ ಪ್ರಕಟಣೆಯಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಅಧ್ಯಕ್ಷರು ತಿಳಿಸಿದ್ದಾರೆ.

14-06-2024ರಿಂದ 22-06-2024ರವರೆಗೆ 2024ರ ಎಸ್ ಎಸ್ ಎಲ್ ಸಿ ಪರೀಕ್ಷೆ -2 ನಡೆದುತ್ತು. ಎಸ್ಸೆಸ್ಸೆಲ್ಸಿ ಪರೀಕ್ಷೆ-2ಕ್ಕೆ 1,79,169 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡು ಪರೀಕ್ಷೆಗೆ ಹಾಜರಾಗಿದ್ದರು. 2024ರ ಎಸ್.ಎಸ್.ಎಲ್.ಸಿ. ಪರೀಕ್ಷೆ-2ರ ವಿಜ್ಞಾನ, ದ್ವಿತೀಯ ಭಾಷೆ ಇಂಗ್ಲಿಷ್ ಮತ್ತು ದ್ವಿತೀಯ ಭಾಷೆ ಕನ್ನಡ ವಿಷಯದ ಕೀ ಉತ್ತರಗಳನ್ನು ದಿನಾಂಕ:21.06.2024 ರಂದು ಮಂಡಲಿಯ ಜಾಲತಾಣದಲ್ಲಿ https://kseeb.karnataka.gov.inನಲ್ಲಿ ಪ್ರಕಟಿಸಲಾಗಿತ್ತು.



Join Whatsapp