ಮಂಗಳೂರು: ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಇತ್ತೀಚೆಗೆ ಪ್ರತಿಭಟನೆಯಲ್ಲಿ ಮಾತನಾಡುತ್ತಾ ರಾಹುಲ್ ಗಾಂಧಿಗೆ ಪಾರ್ಲಿಮೆಂಟ್ ನಲ್ಲಿ ಕೆನ್ನೆಗೆ ಬಾರಿಸಬೇಕು ಎಂಬಿತ್ಯಾದಿಯಾಗಿ ಅಸಾಂವಿಧಾನಿಕ ಪದಬಳಕೆ ಮಾಡಿದ್ದಾರೆ. ರಾಜಕೀಯವನ್ನು ರಾಜಕೀಯವಾಗಿಯೇ ಎದುರು ಹಾಕಿ ಕೊಳ್ಳುವ ತಾಕತ್ತು ಇಲ್ಲದ ಭರತ್ ಶೆಟ್ಟಿ, ರಾಹುಲ್ ವಿರುದ್ಧ ಬಲ ಪ್ರಯೋಗ ಮಾಡುವ ಪ್ರಸ್ತಾಪ ಮಾಡಿದ್ದಾರೆ ಎಂದು ಮಾಜಿ ಮೇಯರ್ ಕೆ.ಅಶ್ರಫ್ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟನೆ ನೀಡಿರುವ ಅವರು, ರಾಹುಲ್ ಗಾಂಧಿಯು ಪ್ರಜಾಪ್ರಭುತ್ವ ಮಾದರಿಯಲ್ಲಿ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ಸಾಧಿಸಿದ್ದನ್ನು ತಡೆಯಲಾರದೆ ಭರತ್ ಶೆಟ್ಟಿ ನಂಜು ಕಾರುತ್ತಿದ್ದಾರೆ. ರಾಹುಲ್ ಗಾಂಧಿ ವಿರೋಧ ಪಕ್ಷದ ನಾಯಕ ಮತ್ತು ಕ್ಯಾಬಿನೆಟ್ ದರ್ಜೆಯ ಜನಪ್ರತಿನಿಧಿ, ಈ ಪ್ರತಿನಿಧಿಯನ್ನು ಭರತ್ ಶೆಟ್ಟಿ ಸುರತ್ಕಲ್ ನಲ್ಲಿ ನಿಂತು ಕೆನ್ನೆಗೆ ಹೊಡೆಯಬೇಕು ಅಂದರೆ,ಬಿಜೆಪಿಯವರು ಭರತ್ ಶೆಟ್ಟಿಯನ್ನು ಅರ್ಹ ರೀತಿಯಲ್ಲಿಯೇ ಪರಿಗಣಿಸಬೇಕಿದೆ. ಭರತ್ ಶೆಟ್ಟಿಯೂ ಅರಿಯಲಿ ಎಂದು ಹೇಳಿದ್ದಾರೆ.