ಕರ್ತವ್ಯದಲ್ಲಿದ್ದ ಪ್ರಾಂಶುಪಾಲೆಯನ್ನು ಬಲವಂತವಾಗಿ ಕುರ್ಚಿಯಿಂದ ಎಬ್ಬಿಸಿದ ಆಡಳಿತ ಮಂಡಳಿ

Prasthutha|

ಉತ್ತರ ಪ್ರದೇಶ: ಕರ್ತವ್ಯದಲ್ಲಿದ್ದ ಶಾಲಾ ಪ್ರಾಂಶುಪಾಲೆಯನ್ನು ಕುರ್ಚಿಯಿಂದ ಬಲವಂತವಾಗಿ ಎಬ್ಬಿಸಿ ಆ ಕುರ್ಚಿಯಲ್ಲಿ ನೂತನ ಪ್ರಾಂಶುಪಾಲರನ್ನು ಕುಳ್ಳಿರಿಸಿದ ಘಟನೆ ಉತ್ತರಪ್ರದೇಶದ ಪ್ರಯಾಗ್ ರಾಜ್‌ನ ಬಿಷಪ್ ಜಾನ್ಸನ್ ಬಾಲಕಿಯರ ಶಾಲೆಯಲ್ಲಿ ಘಟನೆ ನಡೆದಿದ್ದು ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

- Advertisement -

ಕುರ್ಚಿಯಿಂದ ಏಳದ ಪ್ರಾಂಶುಪಾಲೆಯನ್ನು ಶಾಲಾ ಆಡಳಿತ ಮಂಡಳಿ ಸೇರಿಕೊಂಡು ಕಚೇರಿಯಿಂದ ಬಲವಂತವಾಗಿ ಹೊರಹಾಕಿದ ನಾಟಕೀಯ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

ಬಿಷಪ್ ಜಾನ್ಸನ್ ಬಾಲಕಿಯರ ಶಾಲೆಯ ಪ್ರಾಂಶುಪಾಲೆ ಪಾರುಲ್ ಸೊಲೊಮನ್ ಹೆಸರೂ ಪೇಪರ್ ಸೋರಿಕೆ ಪ್ರಕರಣದಲ್ಲಿ ಕೇಳಿಬಂದಿತ್ತು. ಈ ಕಾರಣಕ್ಕಾಗಿ ಪ್ರಾಂಶುಪಾಲೆಯನ್ನು ಬದಲಾಯಿಸುವ ನಿರ್ಣಯಕ್ಕೆ ಶಾಲಾ ಆಡಳಿತ ಬಂದಿದ್ದು ಪಾರುಲ್ ಜಾಗಕ್ಕೆ ಹೊಸ ಪ್ರಾಂಶುಪಾಲೆಯನ್ನು ನೇಮಕ ಮಾಡಲಾಗಿತ್ತು. ಅದರಂತೆ ಹಾಲಿ ಪ್ರಾಂಶುಪಾಲೆಯನ್ನು ಕುರ್ಚಿ ಬಿಟ್ಟುಕೊಡುವಂತೆ ಕೇಳಿದ್ದಾರೆ. ಆದರೆ ಆಕೆ ಕುರ್ಚಿ ಬಿಟ್ಟು ಕೊಡಲು ನಿರಾಕರಿಸಿದ ಕಾರಣಕ್ಕೆ ಆಡಳಿತ ಮಂಡಳಿ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.



Join Whatsapp