ಹೆಚ್‌ಎಸ್‌ಆರ್‌ಪಿ ಅಳವಡಿಸಲು ಸೆಪ್ಟಂಬರ್‌ 15ರ ವರೆಗೆ ಅವಧಿ ವಿಸ್ತರಣೆ

Prasthutha|

ಬೆಂಗಳೂರು: ರಾಜ್ಯದಲ್ಲಿ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫ‌ಲಕ (ಹೆಚ್‌ಎಸ್‌ಆರ್‌ಪಿ) ಅಳವಡಿಸಲು ಸೆಪ್ಟಂಬರ್‌ 15ರ ವರೆಗೆ ಅವಧಿ ವಿಸ್ತರಿಸಲಾಗಿದೆ ಎಂದು ರಾಜ್ಯ ಸರಕಾರ ಹೈಕೋರ್ಟ್‌ಗೆ ತಿಳಿಸಿದೆ.

- Advertisement -

ಈ ವೇಳೆ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ವಿಕ್ರಮ್‌ ಹುಯಿಲಗೋಳ ನ್ಯಾಯಪೀಠದ ಮುಂದೆ, ಎಚ್‌ಎಸ್‌ಆರ್‌ಪಿ ಅಳವಡಿಸಿಕೊಳ್ಳಲು ನಿಗದಿಪಡಿಸಲಾಗಿದ್ದ ಅವಧಿಯನ್ನು ಸೆ. 15ರ ವರೆಗೆ ರಾಜ್ಯ ಸರಕಾರ ವಿಸ್ತರಿಸಿದೆ ಎಂದು ನ್ಯಾಯಪೀಠಕ್ಕೆ ಮಾಹಿತಿ ನೀಡಿದರು.

1.4 ಕೋಟಿ ವಾಹನ ನೋಂದಣಿಗೆ ಬಾಕಿ!

- Advertisement -

ರಾಜ್ಯದಲ್ಲಿ ಇಲ್ಲಿವರೆಗೆ 43 ಲಕ್ಷ ವಾಹನಗಳಿಗೆ ಹೆಚ್‌ಎಸ್‌ಆರ್‌ಪಿ ಅಳವಡಿಸಲಾಗಿದ್ದು, ಇನ್ನೂ 1.3ರಿಂದ 1.4 ಕೋಟಿ ವಾಹನಗಳು ಬಾಕಿ ಇವೆ ಎಂದು ಹೇಳಲಾಗಿದೆ.



Join Whatsapp