ವಿಪಕ್ಷ ನಾಯಕ ರಾಹುಲ್ ಗಾಂಧಿ ಅಯೋಗ್ಯತನವನ್ನು ಪ್ರರ್ದರ್ಶನ ಮಾಡಿದ್ದಾರೆ: ಸಿಟಿ ರವಿ

Prasthutha|

ಚಿಕ್ಕಮಗಳೂರು: ಲೋಕಸಭೆಯ ಕಲಾಪದಲ್ಲಿ ಹಿಂದುತ್ವದ ಬಗ್ಗೆ ಮಾತನಾಡುವ ಮೂಲಕ ವಿಪಕ್ಷ ನಾಯಕ ರಾಹುಲ್ ಗಾಂಧಿ ಅಯೋಗ್ಯತನವನ್ನ ಪ್ರರ್ದರ್ಶನ ಮಾಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದ್ದಾರೆ.

- Advertisement -

ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಟಿ ರವಿ, ಸಂಸದ ರಾಹುಲ್ ಗಾಂಧಿ ತಾವೋರ್ವ ವಿಪಕ್ಷ ನಾಯಕ ಅನ್ನವ ಜವಾಬ್ದಾರಿ ಮರೆತಿದ್ದಾರೆ. ಹಿಂದೂಗಳ ಮನಸ್ಸಿನಲ್ಲಿ ದ್ವೇಷ ಭಾವನೆ ಇವರೇ ಬಿತ್ತುತ್ತಿದ್ದಾರೆ. ಹಿಂದೂ ಧರ್ಮ ‘ಸರ್ವೇ ಜನ ಸುಖಿನೋಭವಂತು’ ಅನ್ನೋದನ್ನು ಪ್ರತಿಪಾದಿಸಿದೆ. ಹಿಂದೂ ಅನ್ನೋದು ವಿಶ್ವವೇ ಒಂದು ಕುಟುಂಬ ಅಂತ ಭಾವಿಸೋದು. ಹಿಂದೂ ಅನ್ನೋದು ಅಣುರೇಣು ತೃಣಕಾಷ್ಟಗಳಲ್ಲೂ ಭಗವಂತನನ್ನು ಕಾಣೋದು. ಹಿಂದೂ ಅನ್ನೋದು ಮನುಷ್ಯ ಮಾತ್ರವಲ್ಲ ಮರಗಿಡ-ಪ್ರಾಣಿಪಕ್ಷಿಯೂ ಚೆನ್ನಾಗಿರಬೇಕೆಂದು ಪ್ರಾರ್ಥಿಸೋದು ಆಗಿದೆ ಎಂದಿದ್ದಾರೆ‌.

ಅನ್ನ ಬೆಂದಿದೆಯಾ ಅಂತ ನೋಡೋಕೆ ಎಲ್ಲಾ ಅಕ್ಕಿಗಳನ್ನು ಮುಟ್ಟಿ ನೋಡಬೇಕಿಲ್ಲ. ರಾಹುಲ್ ಗಾಂಧಿ ತಮ್ಮ ಚೊಚ್ಚಲ ಭಾಷಣದಲ್ಲಿಯೇ ತಾನು ಆ ಸ್ಥಾನಕ್ಕೆ ಯೋಗ್ಯರಲ್ಲ ಎಂಬುದನ್ನು ಪ್ರದರ್ಶನ ಮಾಡಿದ್ದಾರೆ. ಸಂಸತ್ತಿನ ಕಲಾಪದಲ್ಲಿ ಮಾತನಾಡುವ ಮೂಲಕ ಸಹಸ್ರಾರು ವರ್ಷದ ಸನಾತನ ಪರಂಪರೆಗೆ ಅಪಮಾನದ ಕೆಲಸ ಮಾಡಿದ್ದಾರೆ. ಅವರ ತಮ್ಮ ಹೇಳಿಕೆಗೆ ರಾಷ್ಟ್ರದ ಕ್ಷಮೆಯಾಚನೆ ಮಾಡ್ಬೇಕು ಅಂತ ಆಗ್ರಹಿಸ್ತೇನೆ ಎಂದು ಹೇಳಿದ್ದಾರೆ.



Join Whatsapp