ಬೆಂಗಳೂರು: ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ವಿಚಾರವಾಗಿ ಸಾರ್ವಜನಿಕವಾಗಿ ಮತ್ತು ಮಾಧ್ಯಮಗಳ ಮುಂದೆ ಮಾತನಾಡುವವರು ಬಾಯಿಗೆ ಬೀಗ ಹಾಕಿಕೊಂಡಿರಬೇಕು ಎಂದು ಡಿ.ಕೆ. ಶಿವಕುಮಾರ್ ಖಡಕ್ ಎಚ್ಚರಿಕೆ ನೀಡಿದರೂ ಸಹಕಾರ ಸಚಿವ ರಾಜಣ್ಣ ಕ್ಯಾರೇ ಎನ್ನಲಿಲ್ಲ. ಇನ್ನೂ ಮಾತಾಡುತ್ತೇನೆ, ಏನಾಗುತ್ತೋ ಆಗಲಿ. ನಾನು ಹೆದರೋನಲ್ಲ, ನಾನು ನಾನೇ ಎಂದು ಕೆಎನ್ ರಾಜಣ್ಣ ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರು ನೀಡಿದ ಎಚ್ಚರಿಕೆಗೆ ಪ್ರತಿಕ್ರಿಯಿಸಿದ್ದಾರೆ. ನೋಟಿಸ್ ಕೊಡುತ್ತಾರಾ ಕೊಡಲಿ. ಕೊಟ್ಟು ಆದ ಮೇಲೆ ನಾನು ಮಾತನಾಡುತ್ತೇನೆ ಎಂದಿದ್ದಾರೆ.
ಅವರು (ಡಿ.ಕೆ. ಶಿವಕುಮಾರ್) ವಿವಾದ ಆಗಬಾರದು ಎಂದು ಆ ರೀತಿ ಹೇಳಿರುತ್ತಾರೆ ಎಂದರು.
ಹೆಚ್ಚುವರಿ ಡಿಸಿಎಂ ಕೇಳಬಾರದಾ ನಾವು? ಕೇಳಿದರೆ ತಪ್ಪಾಗುತ್ತದೆಯೇ? ವಾರ್ನಿಂಗ್ ನಾನ್ ಕೇಳ್ತೀನೇನ್ರೀ, ರಾಜಣ್ಣ ರಾಜಣ್ಣಾನೇ. ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕೆಂದು ಹೇಳಿದರೆ ಕೇಳಿಕೊಂಡು ಸುಮ್ಮನೆ ಇರಬೇಕಾ ಎಂದು ಪ್ರಶ್ನಿಸಿದ್ದಾರೆ.