ಸಿದ್ದರಾಮಯ್ಯ-ಕುಮಾರಸ್ವಾಮಿ, ಡಿಕೆಶಿ- ಡಾ. ಮಂಜುನಾಥ್ ಪರಸ್ಪರ ಹಸ್ತಲಾಘವ

Prasthutha|

ನವದೆಹಲಿ: ಕರ್ನಾಟಕದಿಂದ ನೂತನ ಸಂಸದರು, ರಾಜ್ಯಸಭಾ ಸದಸ್ಯರ ಸಭೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದಿದೆ. ಬದ್ಧ ವೈರಿಗಳಂತೆ ಕಾದಾಡುವ ಸಿಎಂ ಸಿದ್ದರಾಮಯ್ಯ ಹಾಗೂ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಪರಸ್ಪರ ಮುಖಾಮುಖಿಯಾಗಿದ್ದಾರೆ. ಕೇಂದ್ರ ಸಚಿವರಾಗಿದ್ದಕ್ಕೆ ಕುಮಾರಸ್ವಾಮಿಯ ಭುಜ ತಟ್ಟಿ ಸಿದ್ದರಾಮಯ್ಯ ಅಭಿನಂದಿಸಿದರೆ, ಹೆಚ್‌ಡಿಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಡಿಕೆ ಶಿವಕುಮಾರ್ ಮತ್ತು ಡಾ. ಮಂಜುನಾಥ್ ಹಸ್ತಲಾಘವ ಮಾಡಿದ್ದಾರೆ.

- Advertisement -

ಬೆಂಗಳೂರು ಗ್ರಾಮಾಂತರದಿಂದ ಗೆದ್ದು ಮೊದಲ ಬಾರಿ ಸಂಸತ್ ಪ್ರವೇಶಿಸಿರುವ ಕುಮಾರಸ್ವಾಮಿ, ಡಾ. ಸಿಎನ್ ಮಂಜುನಾಥ್ ಕೂಡ ಸಭೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಈ ಘಟನೆ ನಡೆದಿದೆ. ತಮ್ಮ ಸಹೋದರ ಡಿಕೆ ಸುರೇಶ್ ಸೋಲಿಸಿರುವ ಬೇಸರ ಮರೆತು, ಡಾ ಮಂಜುನಾಥ್ ಜೊತೆ ಡಿಕೆಶಿ ಮಾತನಾಡಿದರು. ಸಂಸದರಾಗಿದ್ದಕ್ಕೆ ಅಭಿನಂದಿಸಿದರು. ಅದಕ್ಕೆ ಡಾಕ್ಟರ್ ಕೂಡ ನಗುತ್ತಲೇ ಹಸ್ತಲಾಘವ ನೀಡಿದರು.

ದೆಹಲಿಯ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಲಾಗಿದ್ದ ರಾಜ್ಯದಿಂದ ಆಯ್ಕೆಯಾದ ಸಂಸದರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದೆ ಎಂದು ಸಿಎಂ Xನಲ್ಲಿ ಪೋಸ್ಟ್ ಮಾಡಿದ್ದಾರೆ. ರಾಜ್ಯದ ನೆಲ, ಜಲ, ಸಂಸ್ಕೃತಿ, ಸಂಪನ್ಮೂಲದ ಅಭಿವೃದ್ಧಿಗಾಗಿ ರಾಜ್ಯದ ಸಂಸದರೆಲ್ಲರೂ ಒಕ್ಕೊರಲಿನಿಂದ ಒಂದೇ ಧ್ವನಿಯಲ್ಲಿ ಪ್ರಯತ್ನಿಸುವ ಅಗತ್ಯವಿದೆ. ಇದಕ್ಕಾಗಿ ಇಂದು ಸೌಹಾರ್ದಯುತ ಸಭೆ ಆಯೋಜಿಸಲಾಗಿದೆ. ಕರುನಾಡು ಮತ್ತು ಕನ್ನಡಿಗರ ಹಿತಕ್ಕಾಗಿ ತಮ್ಮೆಲ್ಲರ ಸಹಕಾರ ಇರಲಿ ಎಂದು X ಮಾಡಿದ್ದಾರೆ.



Join Whatsapp