‘ಇದು ಇತಿಹಾಸದ ಪುನರ್ ನಿರ್ಮಾಣ’ : ಎಸ್.ಡಿ.ಪಿ.ಐಗೆ ಸೇರಿದ ದಲಿತ ಚಳವಳಿ ನಾಯಕ ಬಿ. ಆರ್. ಭಾಸ್ಕರ್ ಪ್ರಸಾದ್ ಹೇಳಿಕೆ

Prasthutha|

ಬೆಂಗಳೂರು:  ಎಸ್.ಡಿ.ಪಿ.ಐ ಪುಲಕೇಶಿನಗರ ವಿಧಾನಸಭಾ ವತಿಯಿಂದ ‘ಸ್ವಾಭಿಮಾನದ ರಾಜಕೀಯಕ್ಕಾಗಿ’ ಎಂಬ ಘೋಷಣೆಯೊಂದಿಗೆ ದಲಿತ ಚಳವಳಿಯ ನಾಯಕ ಹಾಗೂ ಪ್ರಗತಿಪರ ಚಿಂತಕರಾದ ಬಿ.ಆರ್. ಭಾಸ್ಕರ್ ಪ್ರಸಾದ್ ಮತ್ತು ಇನ್ನಿತರ ದಲಿತ ನಾಯಕರು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮವು ಬೆಂಗಳೂರು ಕೆ.ಜೆ.ಹಳ್ಳಿಯ ಎಸ್.ಎಂ. ಫಂಕ್ಷನ್ ಸಭಾಂಗಣದಲ್ಲಿ ನಡೆಯಿತು.  

- Advertisement -

ನನ್ನದು ಬದ್ಧತೆ ಮತ್ತು ಗೌರವಯುತವಾದ ರಾಜಕಾರಣವಾಗಿರುವುದರಿಂದ ಎಸ್.ಡಿ.ಪಿ.ಐ ಪಕ್ಷಕ್ಕೆ ಸೇರಿಕೊಂಡೆ.  ವಿರೋಧಿಗಳಿಗೆ ನನ್ನ ಕೆಲಸದ ಮೂಲಕ ಉತ್ತರ ನೀಡುತ್ತೇನೆ.‌  ಬಿಜೆಪಿ ಬರುತ್ತದೆ ಎಂದು ಹೇಳಿ ಕಾಂಗ್ರೆಸ್ ನಮಗೆ ಕೊಟ್ಟಿರುವುದು ಶೂನ್ಯ. ಕಾಂಗ್ರೆಸ್ ಮತ್ರು ಬಿಜೆಪಿ ಎರಡು ತಲೆಯ ನಾಗರ ಹಾವು.  ಕಾಂಗ್ರೆಸ್ ಮಾಡಿದ ಮೋಸದಿಂದ ಮಾದಿಗ ಸಮುದಾಯ ಅತ್ಯಂತ ಶೋಷಣೆಗೆ ಒಳಪಟ್ಟಿದೆ. ದಲಿತ ಮತ್ತು ಮುಸಲ್ಮಾನರು ರಾಜಕೀಯವಾಗಿ ಪ್ರಬಲ ಶಕ್ತಿಯಾಗಿ ಈ ಸಮಯದಲ್ಲಿ ಅತ್ಯಾವಶ್ಯಕ. ಕೆಲವೇ ದಿನಗಳಲ್ಲಿ ಶೋಷಿತ ಸಮುದಾಯಗಳ, ದಲಿತ ಮತ್ತು ಮುಸಲ್ಮಾನರ ಸ್ವಾಭಿಮಾನದ ರಾಜಕೀಯವನ್ನು ಮುಂದುವರೆಸಲು ಪ್ರತಿಯೊಂದು ಹಳ್ಳಿಗೂ ಸಂಚಾರ ಮಾಡುತ್ತೇವೆ. ಎಸ್.ಡಿ.ಪಿ.ಐ ಕಾರ್ಯಕರ್ತರು ಪ್ರಾಣ ಕೊಡಬಹುದು ಆದರೆ ಕೊಟ್ಟ ಮಾತನ್ನು ಅವರು ಎಂದೂ ತಪ್ಪುವುದಿಲ್ಲ ಎನ್ನುವುದರ ಸ್ಪಷ್ಟ ಅರಿವು ಇದ್ದೇ ನಾನು ಈ ಪಕ್ಷಕ್ಕೆ ಸೇರಿದ್ದೇನೆ. ಇಂದು ಇತಿಹಾಸ ಪುನರ್ ನಿರ್ಮಾಣವಾಯಿತು ಎಂದು ಮಾಧ್ಯಮಗಳು ತನ್ನ ವರದಿಯಲ್ಲಿ ಬರೆದುಕೊಳ್ಳಲಿ ಎಂದು ಪಕ್ಷಕ್ಕೆ ಸೇರಿದ ನಂತರ ಭಾಸ್ಕರ್ ಪ್ರಸಾದ್ ಹೇಳಿದರು.

ರಾಜ್ಯಾಧ್ಯಕ್ಷರಾದ ಅಬ್ದುಲ್ ಹನ್ನಾನ್, ರಾಜ್ಯ ಪ್ರಧಾನ ಕಾರ್ಯದರ್ಶಿ  ಮುಜಾಹಿದ್ ಪಾಶಾ,  ಅಫ್ಸರ್ ಕೊಡ್ಲಿಪೇಟೆ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಅಬ್ದುಲ್ ಮಜೀದ್, ವಿಮೆನ್ ಇಂಡಿಯಾ ಮೂಮೆಂಟಿನ ಸಾದಿಯಾ ಗುಲ್ಬರ್ಗಾ, ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಮೆಹಬೂಬ್ ಷರೀಫ್ , ರಾಜ್ಯ ಉಪಾಧ್ಯಕ್ಷ ನ್ಯಾಯವಾದಿ ಮಜೀದ್, ನ್ಯಾಯವಾದಿ ತಾಹೀರ್ ರವರು ಕೂಡಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.



Join Whatsapp