ಟಿ20 ವಿಶ್ವಕಪ್ 2024ನಲ್ಲಿ ಹೆಚ್ಚು ರನ್‌ & ಹೆಚ್ಚು ವಿಕೆಟ್‌: ಅಫ್ಗಾನಿಸ್ತಾನ ಆಟಗಾರರು ನಂಬರ್ 1

Prasthutha|

ನವದೆಹಲಿ: 20 ತಂಡಗಳು ನಾಲ್ಕು ಗುಂಪುಗಳಾಗಿ ಸೆಣಸಾಟ ನಡೆಸಿದ ಟಿ20 ವಿಶ್ವಕಪ್ 2024 ಟೂರ್ನಿಯ ಸೂಪರ್‌ 8 ಹಂತ ನಿನ್ನೆಯಷ್ಟೇ ಮುಕ್ತಾಯವಾಗಿದ್ದು, ಇದುವರೆಗೆ ಅತಿಹೆಚ್ಚು ರನ್‌ ಗಳಿಕೆ ಹಾಗೂ ಅಧಿಕ ವಿಕೆಟ್‌ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಅಫ್ಗಾನಿಸ್ತಾನ ಆಟಗಾರರು ನಂಬರ್ 1 ಸ್ಥಾನದಲ್ಲಿದ್ದಾರೆ.

- Advertisement -

ಅಫ್ಘಾನಿಸ್ತಾನದ ಇಬ್ಬರು ಬ್ಯಾಟರ್‌ಗಳ ವಿಭಾಗದಲ್ಲಿ ಹಾಗೂ ಮೂವರು ಬೌಲರ್‌ಗಳ ಲಿಸ್ಟ್‌ನಲ್ಲಿ ಅಗ್ರ ಐದರಲ್ಲಿ ಕಾಣಿಸಿಕೊಂಡಿದ್ದಾರೆ.

7 ಪಂದ್ಯಗಳಲ್ಲಿ ಮೂರು ಅರ್ಧಶತಕ ಸಹಿತ 281 ರನ್‌ ಗಳಿಸಿದ ರಹಮಾನುಲ್ಲಾ ಗುರ್ಬಾಝ್ ಹೆಚ್ಚು ರನ್‌ ಗಳಿಸಿಕೊಂಡ ಆಟಗಾರರಾಗಿದ್ದಾರೆ. ಅದೇ ತಂಡದ ಫಝಲ್‌ಹಕ್‌ ಫಾರೂಕಿ 16 ವಿಕೆಟ್‌ ಕಬಳಿಸಿ ಬೌಲರ್‌ಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ.

- Advertisement -

ಹೆಚ್ಚು ರನ್ ಗಳಿಸಿದ ಐವರು

  1. ರಹಮಾನುಲ್ಲಾ ಗುರ್ಬಾಝ್ (ಅಫ್ಗಾನಿಸ್ತಾನ): 281 ರನ್‌
  2. ಟ್ರಾವಿಸ್‌ ಹೆಡ್‌ (ಆಸ್ಟ್ರೇಲಿಯಾ): 255 ರನ್‌
  3. ಇಬ್ರಾಹಿಂ ಜದ್ರಾನ್ (ಅಫ್ಗಾನಿಸ್ತಾನ): 229 ರನ್‌
  4. ನಿಕೋಲಸ್ ಪೂರನ್ (ವೆಸ್ಟ್‌ ಇಂಡೀಸ್‌): 228 ರನ್‌
  5. ಆಯಂಡ್ರೋಸ್ ಗೌಸ್ (ಅಮೆರಿಕ): 219 ರನ್‌

ಹೆಚ್ಚು ವಿಕೆಟ್‌ ಪಡೆದ ಐವರು

  1. ಫಝಲ್‌ಹಕ್‌ ಫಾರೂಕಿ (ಅಫ್ಗಾನಿಸ್ತಾನ): 16 ವಿಕೆಟ್‌
  2. ಆರ್ಶದೀಪ್‌ ಸಿಂಗ್ (ಭಾರತ): 15 ವಿಕೆಟ್‌
  3. ರಶೀದ್ ಖಾನ್ (ಅಫ್ಗಾನಿಸ್ತಾನ): 14 ವಿಕೆಟ್‌
  4. ರಿಶದ್‌ ಹೊಸೈನ್‌ (ಬಾಂಗ್ಲಾದೇಶ): 14 ವಿಕೆಟ್‌
  5. ನವೀನ್‌ ಉಲ್‌ ಹಕ್‌ (ಅಫ್ಗಾನಿಸ್ತಾನ): 13 ವಿಕೆಟ್‌


Join Whatsapp