ಜೆಡಿಎಸ್ ಫ್ಲೆಕ್ಸ್ ಗಳಿಂದ ದೇವೇಗೌಡರ ಹಿರಿಯ ಮಗ ಎಚ್‌ಡಿ ರೇವಣ್ಣ ಕಿಕ್ ಔಟ್!

Prasthutha|

ಮಂಡ್ಯ: ಮಾಜಿ ಸಚಿವ ಎಚ್‌ಡಿ ರೇವಣ್ಣ ಕುಟುಂಬ ಲೈಂಗಿಕ ಕಿರುಕುಳ, ಅಪಹರಣ ಆರೋಪ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಮಂಡ್ಯನಗರದಲ್ಲಿ ದಳಪತಿಗಳು ಜೆಡಿಎಸ್ ಫ್ಲೆಕ್ಸ್‌ ಗಳಿಂದ ರೇವಣ್ಣ ಫೋಟೊ ಕಿಕ್‌’ಔಟ್ ಮಾಡಿದ್ದಾರೆ.

- Advertisement -

ಪ್ರಧಾನಿ ಮೋದಿ ನೇತೃತ್ವದ ಎನ್‌ ಡಿಎ ಸರ್ಕಾರದಲ್ಲಿ ಎಚ್‌ಡಿ ಕುಮಾರಸ್ವಾಮಿ ಕೇಂದ್ರ ಸಚಿವರಾದ ಬಳಿಕ ಮಂಡ್ಯನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಬೃಹತ್ ಫ್ಲೆಕ್ಸ್ ಅಳವಡಿಸಲಾಗಿದೆ. ಫ್ಲೆಕ್ಸ್‌ ಗಳಲ್ಲಿ ಜೆಡಿಎಸ್ ಮುಖಂಡರು, ಬಿಜೆಪಿ ನಾಯಕರಾದ ಯಡಿಯೂರಪ್ಪ, ವಿಜಯೇಂದ್ರ, ಆರ್ ಅಶೋಕ್, ಮಾಜಿ ಸಂಸದೆ ಸುಮಲತಾ, ಮಾಜಿ ಸಚಿವ ಹೆಚ್ ವಿಶ್ವನಾಥ್ ಸೇರಿದಂತೆ ಹಲವರ ಫೋಟೊಗಳಿವೆ. ಆದರೆ ಎಚ್‌ಡಿ ರೇವಣ್ಣ ಫೋಟೊ ಕೈಬಿಟ್ಟಿದ್ದಾರೆ.

ಅಶ್ಲೀಲ ವಿಡಿಯೋ, ಅಸಹಜ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಪ್ರಜ್ವಲ್, ಸೂರಜ್ ರೇವಣ್ಣ. ಅದೇ ರೀತಿ ಅಪಹರಣ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿರುವ ರೇವಣ್ಣ, ಜಾಮೀನು ಪಡೆದಿರುವ ಪತ್ನಿ ಭವಾನಿ ರೇವಣ್ಣ. ಇವೆಲ್ಲ ಘಟನೆಗಳಿಂದ ಎಚ್‌ ಡಿ ದೇವೇಗೌಡರ ಕುಟುಂಬಕ್ಕೆ ದೊಡ್ಡ ಮಟ್ಟದ ಕಳಂಕ ತಂದಿವೆ. ಇದರಿಂದಾಗುವ ಮುಜುಗರ ತಪ್ಪಿಸಲು ಮಂಡ್ಯನಗರದಲ್ಲಿ ದಳಪತಿಗಳು ಜೆಡಿಎಸ್ ಫ್ಲೆಕ್ಸ್‌ಗಳಿಂದ ರೇವಣ್ಣ ಫೋಟೊ ಕಿಕ್‌ ಔಟ್ ಮಾಡಿದ್ದಾರೆ.



Join Whatsapp