ವೆಸ್ಟ್ ಇಂಡೀಸ್ ವಿರುದ್ಧ ಜಯಿಸಿ ಸೆಮಿ ಫೈನಲ್ ಪ್ರವೇಶಿಸಿದ ದಕ್ಷಿಣ ಆಫ್ರಿಕಾ

Prasthutha|

ಮೊದಲ ಸುತ್ತಿನಲ್ಲಿ 4 ಪಂದ್ಯಗಳಲ್ಲಿ ವಿಜಯ ಸಾಧಿಸಿದ್ದ ಆಫ್ರಿಕನ್ನರಿಗೆ ದ್ವಿತೀಯ ಸುತ್ತಿನಲ್ಲೂ 3 ಗೆಲುವು

- Advertisement -

ಟಿ20 ವಿಶ್ವಕಪ್‌ನ 50ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವೆಸ್ಟ್ ಇಂಡೀಸ್ ವಿರುದ್ಧ ಮೂರು ವಿಕೆಟ್‌ಗಳಿಂದ ಜಯ ಸಾಧಿಸಿದೆ.

2 ತಂಡಕ್ಕೂ ತುಂಬಾ ಮುಖ್ಯವಾಗಿದ್ದ ಪಂದ್ಯದಲ್ಲಿ ಮಳೆಯ ಆತಂಕದ ನಡುವೆಯೂ ದಕ್ಷಿಣ ಆಫ್ರಿಕಾ ತಂಡಕ್ಕೆ ಗೆಲುವು ಸಿಕ್ಕಿದೆ. ಈ ಮೂಲಕ ದಕ್ಷಿಣ ಆಫ್ರಿಕಾ ಸೆಮಿ ಫೈನಲ್ ಗೆ ಪ್ರವೇಶ ಪಡೆದಿವೆ. ಆದರೆ, ತವರಿನಲ್ಲಿಯೇ ವಿಶ್ವ ಕಪ್ ಗೆಲ್ಲುವ ಉತ್ಸಾಹದಲ್ಲಿದ್ದ ವೆಸ್ಟ್ ಇಂಡೀಸ್ ಕನಸು ಕಮರಿ ಹೋಗಿದೆ.

- Advertisement -

ಟಿ20 ವಿಶ್ವಕಪ್ 2024ರಲ್ಲಿ ಸೌತ್ ಆಫ್ರಿಕಾ ತಂಡ ಗೆಲುವಿನ ನಾಗಾಲೋಟ ಮುಂದುವರೆಸಿದಂತಾಗಿದೆ. ಮೊದಲ ಸುತ್ತಿನಲ್ಲಿ 4 ಪಂದ್ಯಗಳಲ್ಲಿ ವಿಜಯ ಸಾಧಿಸಿದ್ದ ಆಫ್ರಿಕನ್ನರು, ಇದೀಗ ದ್ವಿತೀಯ ಸುತ್ತಿನಲ್ಲೂ 3 ಗೆಲುವು ದಾಖಲಿಸಿದ್ದಾರೆ. ಈ ಗೆಲುವುಗಳ ಮೂಲಕ ಸೌತ್ ಆಫ್ರಿಕಾ ತಂಡ ಸೆಮಿಫೈನಲ್​ಗೆ ಪ್ರವೇಶಿಸಿದೆ.

ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ್ದ ದಕ್ಷಿಣ ಆಫ್ರಿಕಾ ತಂಡ ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್ ಗಳನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು. ರೋಸ್ಟನ್ ಚೇಸ್ ಅರ್ಧಶತಕದ ಸಹಾಯದಿಂದ ವೆಸ್ಟ್ ಇಂಡೀಸ್ ತಂಡ 135 ರನ್ ದಾಖಲಿಸಿತು. ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಮಾಡುವ ಸಮಯದಲ್ಲಿ ಮಳೆ ಅಡ್ಡಿಯಾದ ಕಾರಣ dls ಪ್ರಕಾರ 17 ಓವರ್‌ಗಳಲ್ಲಿ 123 ರನ್ ಗಳಿಸಬೇಕೆಂಬ ಗುರಿ . ದಕ್ಷಿಣ ಆಫ್ರಿಕಾ ತಂಡ 7 ವಿಕೆಟ್ ಕಳೆದುಕೊಂಡು ಪಂದ್ಯದಲ್ಲಿ ಜಯಬೇರಿಯಾಗಿದೆ.

ಟಿ20 ವಿಶ್ವಕಪ್​ ಇತಿಹಾಸದಲ್ಲಿ ಸತತವಾಗಿ ಅತೀ ಹೆಚ್ಚು ಗೆಲುವು ದಾಖಲಿಸಿದ ವಿಶ್ವ ದಾಖಲೆ ಆಸ್ಟ್ರೇಲಿಯಾ ತಂಡದ ಹೆಸರಿನಲ್ಲಿದೆ. 2022-2024 ರ ಟಿ20 ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾ ಸತತ 8 ಗೆಲುವು ದಾಖಲಿಸಿ ಈ ದಾಖಲೆ ನಿರ್ಮಿಸಿದೆ. ಇದೀಗ ಸತತ 7 ಜಯ ಸಾಧಿಸಿರುವ ಸೌತ್ ಆಫ್ರಿಕಾ ತಂಡ ಸೆಮಿಫೈನಲ್ ಮತ್ತು ಫೈನಲ್​ನಲ್ಲಿ ಜಯಭೇರಿ ಬಾರಿಸಿದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ.



Join Whatsapp