ಬೋಳಿಯಾರು ಗಲಾಟೆ: ಮತ್ತೆ ಅಮಾಯಕರ ಬಂಧನ ಆರೋಪ

Prasthutha|

- Advertisement -

FIRನಲ್ಲಿ ಹೆಸರಿಲ್ಲದ ವ್ಯಕ್ತಿಯನ್ನು ವಶಕ್ಕೆ ಪಡೆದ ಕೊಣಾಜೆ ಪೊಲೀಸರು?

ಮಂಗಳೂರು : ಜೂನ್ 9ರಂದು ಉಳ್ಳಾಲ ತಾಲೂಕಿನ ಬೋಳಿಯಾರಿನಲ್ಲಿ ಬಿಜೆಪಿ ಸಂಭ್ರಮಾಚರಣೆ ವೇಳೆ ನಡೆದಿದ್ದ ಗಲಾಟೆಗೆ ಸಂಬಂಧಿಸಿ ಕೊಣಾಜೆ ಪೊಲೀಸರು ಮತ್ತೆ ಅಮಾಯಕ ಮುಸ್ಲಿಮರನ್ನು ಬೇಟೆಯಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

- Advertisement -

ಇಂದು ರಾತ್ರಿ ಕೊಣಾಜೆ ಪೊಲೀಸರ ತಂಡ ಬಂದು ಬೋಳಿಯಾರಿನಲ್ಲಿ ಸಿರಾಜ್ ಎಂಬವರನ್ನು ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ. ಬೋಳಿಯಾರು ಪ್ರಕರಣದಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಸಿರಾಜ್ ಆರೋಪಿಯಾಗಿಲ್ಲ, ಆದರೂ ಪೊಲೀಸರು ಬಂದು ಅಮಾಯಕನನ್ನು ಕರೆದುಕೊಂಡು ಠಾಣೆಗೆ ಹೋಗಿದ್ದಾರೆ ಎಂದು ಅವರ ಕುಟುಂಬಸ್ಥರು ಆರೋಪಿಸಿದ್ದಾರೆ.
ಬೋಳಿಯಾರು ಗಲಾಟೆಗೆ ಸಂಬಂಧಿಸಿ ಕೊಣಾಜೆ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್‌ಐಅರ್ ದಾಖಲಾಗಿತ್ತು.

ಬಿಜೆಪಿ ಕಾರ್ಯಕರ್ತರನ್ನು ಚೂರಿಯಿಂದ ಇರಿದ ಆರೋಪದಲ್ಲಿ ಪೊಲೀಸರು 19 ಮಂದಿ ಮುಸ್ಲಿಮರ ಮೇಲೆ ಕೇಸ್ ದಾಖಲಿಸಿದ್ದರು. ಅದರಲ್ಲಿ 13 ಮಂದಿ ಆರೋಪಿಗಳ ಬಂಧನವಾಗಿದೆ. ಉಳಿದ 6 ಮಂದಿ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಇಂದು ರಾತ್ರಿ ಪೊಲೀಸರು ವಶಕ್ಕೆ ಪಡೆದಿರುವ ಸಿರಾಜ್ ಹೆಸರು ಎಫ್‌ಐಆರ್‌ನಲ್ಲಿ ಇರಲಿಲ್ಲ. ಸಿರಾಜ್ ಅಮಾಯಕ ಎಂದು ಅವರ ಮನೆಯವರು ಹೇಳಿದ್ದಾರೆ.

ಬೋಳಿಯಾರು ಗಲಾಟೆಗೆ ಸಂಬಂಧಿಸಿ ಕೊಣಾಜೆ ಠಾಣೆಯಲ್ಲಿ ದಾಖಲಾಗಿರುವ ಮತ್ತೊಂದು ಎಫ್‌ಐಆರ್‌ನಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಕೇಸ್ ದಾಖಲಾಗಿದೆ. ಆದರೆ ಪೊಲೀಸರು ಆರೋಪಿಗಳಾದ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿಲ್ಲ ಎಂಬ ಆರೋಪ ಕೇಳಿಬಂದಿದೆ. ಕೊಣಾಜೆ ಪೊಲೀಸರು ತಾರತಮ್ಯ ಮಾಡುತ್ತಿದ್ದಾರೆ, ಈವರೆಗೆ 13 ಮಂದಿ ಮುಸ್ಲಿಮರನ್ನು ಬಂಧಿಸಿರುವ ಪೊಲೀಸರು ಘಟನೆ ನಡೆದು 15 ದಿನಗಳಾದರೂ ಮುಸ್ಲಿಮರನ್ನು ಬೇಟೆಯಾಡುವುದನ್ನು ನಿಲ್ಲಿಸುತ್ತಿಲ್ಲ, ಆದರೆ ಆರೋಪಿತ ಬಿಜೆಪಿ‌ ಕಾರ್ಯಕರ್ತರ ಮೇಲೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಸ್ಥಳೀಯ ಮುಸ್ಲಿಮರು ಆರೋಪಿಸಿದ್ದಾರೆ.



Join Whatsapp