ಬೆಂಗಳೂರು: ಕುಮಾರಸ್ವಾಮಿಯಂತವನು ನಾಡಿಗೆ ಪರಿಚಯ ಆಗಬೇಕಾದರೆ ಅದಕ್ಕೆ ಮೂಲ ಕಾರಣ ಯಡಿಯೂರಪ್ಪ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಅರಮನೆ ಆವರಣದಲ್ಲಿ ಹೊಸದಾಗಿ ಆಯ್ಕೆಯಾಗಿರುವ ಎನ್‌ಡಿಎ ಸಂಸದರಿಗೆ ಏರ್ಪಡಿಸಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಅವಾಗ ಯಡಿಯೂರಪ್ಪ ಅವರು ನನಗೆ ಮುಕ್ತ ಅವಕಾಶ ನೀಡಿದ್ದರಿಂದ ಅತ್ಯುತ್ತಮ ಸರ್ಕಾರ ಮಾಡಿದ್ದೆ. ಅಧಿಕಾರ ಹಸ್ತಾಂತರ ಮಾಡಬೇಕಾದರೆ, ಅದು ನನ್ನಿಂದ ಆಗಿರುವ ತಪ್ಪು ಅಲ್ಲ. ಕೆಲವರ ಕುತಂತ್ರದಿಂದ ತಪ್ಪುಗಳಾಗಿವೆ. ನಾವು ಆವಾಗಲೇ ಮೈತ್ರಿ ಮುಂದುವರಿದಿದ್ದರೆ ಇಷ್ಟೊತ್ತಿಗೆ ಕಾಂಗ್ರೆಸ್ ನೆಲ ಕಚ್ಚುತ್ತಿತ್ತು ಎಂದಿದ್ದಾರೆ.
ಮುಂಬರುವ ಚುನಾವಣೆಯಲ್ಲಿ
ಯಾರೂ ಭಿನ್ನಾಭಿಪ್ರಾಯ, ಸಂಶಯಗಳನ್ನ ಹುಟ್ಟುಹಾಕದೇ, ಅದಕ್ಕೆ ಕಿವಿಕೊಡದೇ ಸಹೋದರ ಭಾವನೆಯಿಂದ ಕೆಲಸ ಮಾಡಬೇಕು ಎಂದು ಕರೆ ನೀಡುವ ಮೂಲಕ ಮೈತ್ರಿ ಮುಂದುವರಿಕೆಗೆ ಸ್ಪಷ್ಟ ಮುನ್ನುಡಿ ಬರೆದಿದ್ದಾರೆ.
ನ್ಯಾಯಯುತವಾಗಿ ಜನರ ನಿರೀಕ್ಷೆ ಗಳನ್ನು ಈಡೇರಿಸಲು ನರೇಂದ್ರ ಮೋದಿಯವರ ಮನವೊಲಿಕೆ ಮಾಡಿ ಮಾಡಿದಾಗ ಮಾತ್ರ ಈ ಅಭಿನಂದನೆ ನಮಗೆ ಸಲ್ಲುತ್ತದೆ. ಕಿತ್ತೂರು ಕರ್ನಾಟಕ ಭಾಗಕ್ಕೆ ಹೆಚ್ಚು ಯೋಜನೆ ತರಬೇಕು. ಎಲ್ಲಾ ಕಡೆ ಅಭಿವೃದ್ಧಿಗೆ ಆದ್ಯತೆ ಕೊಡಬೇಕು. ಸೋಮಣ್ಣ ಅವರಿಗೆ ಪ್ರಮುಖ ವಾದ ಖಾತೆಗಳಿವೆ. ಆ ಎರಡು ಇಲಾಖೆ ಗಳು ರಾಜ್ಯಕ್ಕೆ ದೊಡ್ಡ ಮಟ್ಟದ ಅಭಿವೃದ್ಧಿ ಆಗೋಕೆ ಪೂರಕವಾಗಿವೆ ಎಂದರು.
ಎರಡು ಪಕ್ಷಗಳ ಕಾರ್ಯಕರ್ತರು ಯಾವುದೇ ಸಂಕೋಚ ಇಲ್ಲದೇ, ಜನರ ಮುಂದೆ ಹೋಗಬೇಕು
ಎಲ್ಲರೂ 28 ಕ್ಷೇತ್ರಗಳಲ್ಲೂ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಈ ಗೆಲುವಿನ ಸಂಪೂರ್ಣ ಯಶಸ್ಸು ಎರಡು ಪಕ್ಷಗಳ ಕಾರ್ಯಕರ್ತರುಗೆ ಸಲ್ಲಿಕೆಯಾಗಬೇಕು ಎಂದರು.