ಈಜು ಕೊಳದಲ್ಲಿ ಮುಳುಗಿ ಮೇಲೆದ್ದು ಬಂದ ಬಾಲಕ ನಾಲ್ಕು ಹೆಜ್ಜೆ ನಡೆಯುವಾಗಲೇ ಮೃತ

Prasthutha|

ಮೀರತ್: 15 ವರ್ಷದ ಬಾಲಕನೋರ್ವ ಸ್ವಿಮ್ಮಿಂಗ್‌ ಪೂಲ್‌ ಸಮೀಪ ಎಲ್ಲರೂ ನೋಡುತ್ತಿದ್ದಂತೆ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ನಡೆದಿದ್ದು, ಆಘಾತಕಾರಿ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

- Advertisement -

ಸಿವಾಲ್ಖಾಸ್‌ ಪ್ರದೇಶದ ನಿವಾಸಿಯಾಗಿರುವ 15 ವರ್ಷದ ಬಾಲಕ ಸಮೀರ್‌ ಬ್ಲೂ ಹೆವನ್‌ ಸ್ವಿಮ್ಮಿಂಗ್‌ಪೂಲ್‌‌ನಲ್ಲಿ ಈಜಾಡಿ ಮತ್ತೆ ನೀರಿಗೆ ಧುಮುಕುವುದರಲ್ಲಿದ್ದ. ಅಷ್ಟಾಗುವಾಗ ಸಮೀರ್‌ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದಾನೆ. ತಕ್ಷಣ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಪ್ರಯೋಜನ ಆಗಲಿಲ್ಲ. ಘಟನೆ ಬಗ್ಗೆ ವರದಿಯಾಗುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

ಈಜುಕೊಳದಲ್ಲಿ ಮುಳುಗಿ ಮೇಲೆದ್ದು ಬಂದ ಬಾಲಕ ನಾಲ್ಕು ಹೆಜ್ಜೆ ನಡೆಯುವಾಗಲೇ ಪ್ರಜ್ಞೆ ತಪ್ಪಿ ಬೀಳುತ್ತಾನೆ. ಕೆಲವರು ಬಾಲಕ ಕುಸಿದು ಬೀಳುತ್ತಿದ್ದಂತೆ ಓಡಿ ಬಂದು ಏನಾಯ್ತು ಎಂದು ನೋಡುತ್ತಾರೆ. ಅಷ್ಟರಲ್ಲಿ ಆತನ ಪ್ರಾಣ ಪಕ್ಷಿ ಹಾರಿ ಹೋಗಿದೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Join Whatsapp