ಪಾಟ್ನಾ: ಸಿವಾನ್ ಜಿಲ್ಲೆಯಲ್ಲಿ ಶನಿವಾರ ಬೆಳಿಗ್ಗೆ ಸಣ್ಣ ಸೇತುವೆ ಕುಸಿದಿದ್ದು, ಇದು ಒಂದು ವಾರದಲ್ಲಿ ಎರಡನೇ ಘಟನೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುಸಿತಕ್ಕೆ ಜಿಲ್ಲಾಡಳಿತದ ನಿರ್ಲಕ್ಷ್ಯವೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯರು, ಈ ಸೇತುವೆಯು ತೀರಾ ಹಳತಾಗಿತ್ತು. ಈ ಸೇತುವೆಯನ್ನು 40 ವರ್ಷಗಳ ಹಿಂದೆ ನಾಲೆ ಅಭಿವೃದ್ಧಿ ಪಡಿಸುವ ಸಂದರ್ಭದಲ್ಲಿ ನಿರ್ಮಾಣ ಮಾಡಲಾಗಿತ್ತು ಹಾಗೂ ಸೂಕ್ತ ನಿರ್ವಹಣೆ ಮಾಡಲಾಗಿರಲಿಲ್ಲ ಎಂದು ಆರೋಪಿಸಿದ್ದಾರೆ.
ಈ ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ. ಸೇತುವೆ ಕುಸಿತದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಕಟ್ಟಡ ನಿರ್ಮಾಣದಲ್ಲಿನ ದೋಷದ ಗಂಭೀರತೆಯನ್ನು ಎತ್ತಿ ತೋರಿಸಿದೆ.
Bihar Bridge Collapse | #Bridge Collapse In Siwan Creates Panic; 2nd Incident This Week
— Voice of Assam (@VoiceOfAxom) June 22, 2024
The sudden collapse of a bridge in Bihar's Siwan today caused widespread panic and uproar in the area. The collapse of the bridge over the Gandak canal occurred with a loud noise that was… pic.twitter.com/zk9KUVxbKo