ಬಿಜೆಪಿ-ಜೆಡಿಎಸ್ ಒಂದಾಗಿ ಕಾಂಗ್ರೆಸ್ ಸೊಕ್ಕು ಮುರಿಯುತ್ತೇವೆ: ವಿಜಯೇಂದ್ರ

Prasthutha|

ಬೆಂಗಳೂರು: ಮುಂದಿನ ದಿನಗಳು ಹೋರಾಟದ ದಿನಗಳು. ಅಧಿವೇಶನದ ಬಳಿಕ ರಾಜ್ಯವ್ಯಾಪಿ ಪ್ರವಾಸ ಮಾಡಿ ಸಂಘಟನೆಗೆ ಶಕ್ತಿ ತುಂಬುತ್ತೇವೆ. ಬಿಜೆಪಿ-ಜೆಡಿಎಸ್ ಒಂದಾಗಿ ಆಡಳಿತ ಪಕ್ಷದ ಸೊಕ್ಕು ಮುರಿಯುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

- Advertisement -


ರಾಜ್ಯದಿಂದ ಆಯ್ಕೆಯಾದ ನೂತನ ಬಿಜೆಪಿ ಹಾಗೂ ಜೆಡಿಎಸ್ ಸಂಸದರಿಗೆ ಮತ್ತು ಕೇಂದ್ರ ಸಚಿವರಿಗೆ ಅರಮನೆ ಮೈದಾನದಲ್ಲಿ ಅಭಿನಂದನಾ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಬಿವೈ ವಿಜಯೇಂದ್ರ ಲೋಕಸಭೆ ಚುನಾವಣೆಯಲ್ಲಿ ಜನರು ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸಿದ್ದಾರೆ ಎಂದರು.


ಕಾಂಗ್ರೆಸ್ ಪಕ್ಷದ ಆಮಿಷದ ನಡುವೆಯೂ ಜನ ಬಿಜೆಪಿ-ಜೆಡಿಎಸ್ ಗೆ ಆಶೀರ್ವಾದ ಮಾಡಿದ್ದಾರೆ. ಕಾಂಗ್ರೆಸ್ ಗೂಬೆ ಕೂರಿಸುತ್ತಿದ್ದರೂ ಅದನ್ನು ಧಿಕ್ಕರಿಸಿ ಜನ ಆಶೀರ್ವಾದ ಮಾಡಿದ್ದಾರೆ. 9 ಕ್ಷೇತ್ರಗಳಲ್ಲಿ ಗೆದ್ದು ಕಾಂಗ್ರೆಸ್ ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುತ್ತಿದೆ. ಸಚಿವರು ಇರುವ ಕ್ಷೇತ್ರಗಳಲ್ಲಿ ಕೂಡ ಎನ್ ಡಿಎ ಲೀಡ್ ಪಡೆದುಕೊಂಡಿದೆ ಎಂದು ತಿಳಿಸಿದರು.

Join Whatsapp