ದರ್ಶನ್‌ಗೆ ಮತ್ತೆ ಪೊಲೀಸ್ ಕಸ್ಟಡಿ ಆಗಲು ಏನು ಕಾರಣ?

Prasthutha|

ಬೆಂಗಳೂರು: ನಟ ದರ್ಶನ್‌ರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಪೊಲೀಸರು ನಾಲ್ಕು ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದ್ದರು. ಅದರಂತೆ ಕೋರ್ಟ್ ಆದೇಶ ಹೊರಡಿಸಿದೆ. ದರ್ಶನ್‌ರನ್ನು ಪೊಲೀಸರು ಮತ್ತೆ ಕಸ್ಟಡಿಗೆ ಪಡೆಯಲು ಯಾವೆಲ್ಲಾ ಕಾರಣ ಕೋರ್ಟಿಗೆ ನೀಡಿದ್ದಾರೆ? ರಿಮ್ಯಾಂಡ್ ಅಪ್ಲಿಕೇಶನ್ ನಲ್ಲಿರುವ ಮಾಹಿತಿ ಇಲ್ಲಿದೆ.

- Advertisement -

16ಅಂಶಗಳನ್ನು ಉಲ್ಲೇಖಿಸಿ ದರ್ಶನ್ ಸೇರಿ ನಾಲ್ವರನ್ನು ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ. ರಿಮ್ಯಾಂಡ್ ಅಪ್ಲಿಕೇಶನ್‌ನಲ್ಲಿ ಇರುವ ಅಂಶಗಳ ಬಗ್ಗೆ ಮಾಹಿತಿ ಹೀಗಿದೆ.

  1. ದರ್ಶನ್ ಸೇರಿ, ಎ9, ಎ10 ಮತ್ತು ಎ14 ಆರೋಪಿಗಳು ಪ್ರಕರಣದಲ್ಲಿ ತನಿಖೆಗೆ ಸರಿಯಾಗಿ ಸ್ಪಂದಿಸ್ತಿಲ್ಲ..

ಕೇಸ್ ಗೆ ಸಂಬಂಧಿಸಿದಂತೆ ವಿಚಾರಗಳನ್ನ ಮರೆ ಮಾಚುತ್ತಿದ್ದು ಈ ವಿಚಾರಗಳನ್ನ ಬಾಯಿ ಬಿಡಿಸಬೇಕು..

- Advertisement -
  1. ನಿನ್ನೆ ದರ್ಶನ್ ಮನೆಯಲ್ಲಿ ಮತ್ತೆ 37,40,000/- ರೂಗಳ ನಗದು ಹಣವನ್ನು ವಶ..

ಅಲ್ಲದೇ ದರ್ಶನ್ ತನ್ನ ಹೆಂಡತಿಗೆ ನೀಡಿದ್ದ ರೂ 3,00,000/- ಹಣವನ್ನು ಕೂಡ ವಶ..

ವಶಪಡೆದಿರೋ ಹಣದ ಮೂಲದ ಬಗ್ಗೆ ಎ2 ಆರೋಪಿ ದರ್ಶನ್ ನಿಂದ ಮಾಹಿತಿ ಪಡೆದುಕೊಂಡು ದಾಖಲಾತಿ ಸಂಗ್ರಹಕ್ಕೆ..

  1. ದರ್ಶನ್ ಆರೋಪಿಯು ಕೃತ್ಯದ ನಂತರ ಹಲವಾರು ವ್ಯಕ್ತಿಗಳನ್ನು ಸಂಪರ್ಕ..

ಬೇರೆ ವ್ಯಕ್ತಿಗಳನ್ನ ಸಂಪರ್ಕಿಸಿರೋ ಉದ್ದೇಶ ಮತ್ತು ಕಾರಣದ ಬಗ್ಗೆ ದರ್ಶನ್ ವಿಚಾರಣೆ ಮಾಡ್ಬೇಕು..

  1. ಪ್ರಕರಣದಲ್ಲಿ ಎ14 ಆರೋಪಿ ಪ್ರದೂಶ್ ಸಾಕ್ಷ್ಯನಾಶ ಮಾಡುವಲ್ಲಿ ಪ್ರಮುಖ ಪಾತ್ರ..

ಪ್ರದೂಶ್ ಕೂಡ ತನಿಖೆಗೆ ಸರಿಯಾಗಿ ಸ್ಪಂದಿಸದೇ ವಿಚಾರಗಳನ್ನು ಮರೆ ಮಾಚುತ್ತಿರೋದು ಬೆಳಕಿಗೆ..

ಅಲ್ಲದೇ ಪ್ರದೋಶ್ ಮತ್ತೊಬ್ಬ ಆಸಾಮಿಯನ್ನು ಕೃತ್ಯದ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದ ಬಗ್ಗೆ ಮಾಹಿತಿ..

ಆದರೆ ಈ ಬಗ್ಗೆ ಆರೋಪಿ ತನಿಖೆಗೆ ಸಹಕರಿಸುತ್ತಿಲ್ಲ..

ಯಾವ ವ್ಯಕ್ತಿ ತನ್ನ ಜೊತೆಯಲ್ಲಿ ಬಂದಿದ್ದ ವ್ಯಕ್ತಿಯ ಬಗ್ಗೆ ಪ್ರದೋಶ್ ಗೆ ಮಾತ್ರ ತಿಳಿದಿದ್ದು

ಪ್ರದೋಶ್ ನ ಹೆಚ್ಚಿನ ವಿಚಾರಣೆಗೆ ಒಳಪಡಿಸಬೇಕಾಗಿರುತ್ತದೆ..

  1. ಎ9 ಆರೋಪಿಯು ಎಲೆಕ್ಟಿಕ್ ಚಾರ್ಜ್ ಟಾರ್ಚ್ ಅನ್ನು ಎಲ್ಲಿ ಖರೀದಿ ಮಾಡಿರುವುದಾಗಿ ಬೆಳಕಿಗೆ..

ಆದ್ರೆ ಈ ಬಗ್ಗೆ ಸರಿಯಾಗಿ ತಿಳಿಸದೇ ವಿಚಾರಗಳನ್ನು ಮರೆ ಮಾಡುತ್ತಿದ್ದು ಆತನನ್ನು ವಿಚಾರಣೆಗೊಳಪಡಿಸಿ ಮಾಹಿತಿಯನ್ನು ಪಡೆದುಕೊಳ್ಳಬೇಕಾಗಿರುತ್ತದೆ..

  1. ಪ್ರಕರಣದಲ್ಲಿನ ಎ9 ಆರೋಪಿಯು ಕೃತ್ಯ ನಡೆದ ಸ್ಥಳಕ್ಕೆ ಬೇರೆ ವ್ಯಕ್ತಿಗಳ ಜೊತೆಯಲ್ಲಿ ಬಂದು ಹೋದ ಬಗ್ಗೆ ಬಂದಿದ್ದ ಬಗ್ಗೆ ಹಾಗೂ ಹೋದ ಬಗ್ಗೆ ವಿಚಾರಣೆ ನಡೆಸಬೇಕಾಗಿರುತ್ತದೆ..
  2. ಪ್ರಕರಣದ ಎ10 ಆರೋಪಿ ಮೊಬೈಲ್ ಪೋನ್‌ನಲ್ಲಿ ಅತೀ ಮುಖ್ಯವಾದ ಸಾಕ್ಷ್ಯಾಧಾರ ದೊರೆತಿದ್ದು ಅದನ್ನು ಕಳುಹಿಸಿದ್ದ ವ್ಯಕ್ತಿ ಯಾರೆಂಬ ಬಗ್ಗೆ ಎ10 ಆರೋಪಿಯ ಉಪಸ್ಥಿತಿಯಲ್ಲಿ ವಿಚಾರಣೆ ಮಾಡಬೇಕಾಗಿರುತ್ತದೆ..
  3. ಕೃತ್ಯ ನಡೆದಿದ್ದ ಸ್ಥಳದ ಶೆಡ್ ನಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರಿಗೆ ಹಲವಾರು ವ್ಯಕ್ತಿಗಳು ಸಾಕ್ಷ್ಯ ನುಡಿಯದಂತೆ ಹಣದ ಆಮಿಷ ನೀಡುತ್ತಿರುವುದು ತಿಳಿದು ಬಂದಿದ್ದು ಸದರಿ ಆಸಾಮಿಗಳು ಆರೋಪಿಗಳೊಂದಿಗೆ ಹೊಂದಿರುವ ಸಂಪರ್ಕದ ಬಗ್ಗೆ ವಿಚಾರಣೆ ನಡೆಸಬೇಕಾಗಿರುತ್ತದೆ.

ಪ್ರಕರಣದ ಎರಡನೇ ಆರೋಪಿ ದರ್ಶನ್ ನಿಂದ ಕೇಸ್ ಮುಚ್ಚಿ ಹಾಕಲು ಪ್ರಯತ್ನ ನಡೆದಿದೆ. ಕೇಸ್ ಮುಚ್ಚಿ ಹಾಕಲು ಎ10 ಮತ್ತು ಎ13 ಆರೋಪಿಗಳ ಮುಖಾಂತರ ಎ16 ಆರೋಪಿಗೆ ರೂ 5,00,000/- ಹಣವನ್ನು ನೀಡಿದ್ದು ಬೆಳಕಿಗೆ ಬಂದಿದೆ. ಈ ಬಗ್ಗೆ ಎ16 ಆರೋಪಿಯು ತನ್ನ ಸ್ನೇಹಿತನಿಗೆ ನೀಡಿದ್ದಾಗಿ ತಿಳಿಸಿದ್ದು ಹಣ ಪಡೆದ ವ್ಯಕ್ರಿ ಪತ್ತೆ ಮಾಡಬೇಕು..

ಈ ಎಲ್ಲಾ ಅಂಶಗಳನ್ನ ಉಲ್ಲೇಖಿಸಿ ದರ್ಶನ್ ಸೇರಿ ನಾಲ್ವರನ್ನ ಕಸ್ಟಡಿಗೆ ಪೊಲೀಸರು ಪಡೆದಿದ್ದಾರೆ.



Join Whatsapp