ಮೋದಿ ತೈಲ ಬೆಲೆ ಏರಿಕೆ ಮಾಡಿದಾಗ ಬಿಜೆಪಿಯವರು ಯಾಕೆ ಪ್ರತಿಭಟಿಸಲಿಲ್ಲ?: ಎಂ.ಬಿ.ಪಾಟೀಲ್

Prasthutha|

ಬೆಂಗಳೂರು: ತೈಲ ಬೆಲೆ ಏರಿಕೆ ವಿರೋಧಿಸಿ ಬಿಜೆಪಿ ನಡೆಸಿದ ಸೈಕಲ್ ಪ್ರತಿಭಟನೆಗೆ ಸಚಿವ ಎಂ.ಬಿ ಪಾಟೀಲ್ ಲೇವಡಿ ಮಾಡಿದ್ದಾರೆ.

- Advertisement -


ಬಿಜೆಪಿ ಅವರು ಸೈಕಲ್ ತುಳಿಯಲಿ ಆರೋಗ್ಯಕ್ಕೆ ಒಳ್ಳೆಯದು ಎಂದು ಟೀಕಿಸಿದ್ದಾರೆ.

ಬಿಜೆಪಿ ಪ್ರತಿಭಟನೆ ಬಗ್ಗೆ ಮಾತನಾಡಿದ ಅವರು, ಯುಪಿಎ ಮನಮೋಹನ್ ಸಿಂಗ್ ಸರ್ಕಾರ ಇದ್ದಾಗ ಜಾಗತಿಕ ಮಾರ್ಕೆಟ್ ನಲ್ಲಿ ಕಚ್ಚಾತೈಲ ಬೆಲೆ ಜಾಸ್ತಿ ಇತ್ತು. ಆಗಲೂ ತೈಲ ಬೆಲೆ ಕಡಿಮೆ ಇತ್ತು. ಮೋದಿ ಸರ್ಕಾರ ಬಂದಾಗ ಕಚ್ಚಾತೈಲ ಬೆಲೆ ಕಡಿಮೆ ಆದರೂ ಮೋದಿ ಸರ್ಕಾರ ತೈಲಬೆಲೆ ಏರಿಕೆ ಮಾಡಿತ್ತು. ಆಗ ಯಾಕೆ ಬಿಜೆಪಿ ಅವರು ಪ್ರತಿಭಟನೆ ಮಾಡಿಲ್ಲ. ನಾವು 3 ರೂ. ಮಾತ್ರ ಜಾಸ್ತಿ ಮಾಡಿರೋದು. ಬೇರೆ ರಾಜ್ಯಗಳ ಜೊತೆ ನ್ಯಾಷನಲೈಸ್ ಮಾಡೋಕೆ ನಾವು ಏರಿಕೆ ಮಾಡಿದ್ದೇವೆ. ಬೆಲೆ ಏರಿಕೆ ಮಾಡಿದ್ದರೂ ಬೇರೆ ರಾಜ್ಯಕ್ಕಿಂತ ನಮ್ಮದು ಕಡಿಮೆ ಇದೆ ಎಂದು ಹೇಳಿದ್ದಾರೆ.



Join Whatsapp