ಕುದುರೆಮುಖ, ನೇತ್ರಾವತಿ ಪೀಕ್ ಚಾರಣಕ್ಕೆ ಅರಣ್ಯ ಇಲಾಖೆ ಅನುಮತಿ: ಆದರೆ.. ಕಂಡೀಷನ್ಸ್ ಅಪ್ಲೈ

Prasthutha|

ಬೆಳ್ತಂಗಡಿ: ಮಳೆಗಾಲದಲ್ಲಿ ಚಾರಣಕ್ಕೆ ತೆರಳುವ ಟ್ರಕ್ಕಿಂಗ್ ಪ್ರಿಯರಿಗೆ ಅರಣ್ಯ ಇಲಾಖೆ ಸಿಹಿ ನೀಡಿದೆ.

- Advertisement -


ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಕುದುರೆಮುಖ ಮತ್ತು ನೇತ್ರಾವತಿ ಪೀಕ್ ಚಾರಣಕ್ಕೆ ಅತಿ ಹೆಚ್ಚಿನ ಚಾರಣಿಗರ ಒತ್ತಡವಿದ್ದು, ಇಲ್ಲಿ ಚಾರಣಕ್ಕೆ ಅನುಮತಿ ನೀಡಲಾಗಿದೆ. ಒಂದು ಚಾರಣ ಪಥಕ್ಕೆ ಗರಿಷ್ಠ 300 ಜನರಿಗಷ್ಟೇ ಅವಕಾಶ ನೀಡಲಾಗಿದೆ.


ಚಾರಣಪ್ರಿಯರಿಗಾಗಿ www.kudremukhanationalpark.in ವೆಬ್ ಸೈಟ್ ತೆರೆಯಲಾಗಿದ್ದು ಆನ್ ಲೈನ್ ಮೂಲಕವಷ್ಟೇ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಯಾವುದೇ ಕಾರಣಕ್ಕೂ ಆಫ್ ಲೈನ್ ಬುಕ್ಕಿಂಗ್ ಗೆ ಅವಕಾಶ ಇರುವುದಿಲ್ಲ. ಇನ್ನು ಒಬ್ಬ ವ್ಯಕ್ತಿಯು ಗರಿಷ್ಠ 3 ಜನರಿಗೆ ಬುಕ್ಕಿಂಗ್ ಮಾಡಬಹುದಾಗಿದೆ.

- Advertisement -

 ಈ ಹೊಸ ನಿಯಮ ಇದೇ 25ರಿಂದ ಜಾರಿಯಾಗಲಿದೆ. ಎರಡೂ ಗಿರಿಶ್ರೇಣಿಗೆ ದಿನಕ್ಕೆ ಗರಿಷ್ಠ ತಲಾ 300 ಜನರಿಗೆ ಪ್ರವೇಶಾವಕಾಶ ಇರುತ್ತದೆ. ಒಬ್ಬರು ಮೂರು ಜನರಿಗೆ ಮಾತ್ರ ಆನ್‍ ಲೈನ್ ಮೂಲಕ ಬುಕ್ಕಿಂಗ್ ಮಾಡಬಹುದು.

ವಾರಾಂತ್ಯದಲ್ಲಿ 200 ಜನರಿಗೆ ಮಾತ್ರ ಆನ್‍ ಲೈನ್ ಬುಕ್ಕಿಂಗ್ ಅವಕಾಶ ಇದೆ. ಸ್ಥಳೀಯ 50 ಜನರಿಗೆ ಪ್ರತ್ಯೇಕ ಬುಕ್ಕಿಂಗ್ ವ್ಯವಸ್ಥೆ ರೂಪಿಸಿದ್ದು, ಕುದುರೆಮುಖ ಅಥವಾ ಬೆಳ್ತಂಗಡಿ ವಲಯ ಅರಣ್ಯಾಧಿಕಾರಿಗಳನ್ನು ಸಂಪರ್ಕಿಸಿ ಬುಕಿಂಗ್ ಲಾಗಿನ್ ಐಡಿ ಪಡೆದು ನೋಂದಾಯಿಸಿಕೊಳ್ಳಬಹುದು.

ಕೊನೆ ಕ್ಷಣದಲ್ಲಿ ಚಾರಣಕ್ಕೆ ಬರುವ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಲು 50 ಪ್ರವಾಸಿಗರಿಗೆ ತತ್ಕಾಲ್ ರೂಪದಲ್ಲಿ ಬುಕ್ಕಿಂಗ್‌ ಗೆ ಅವಕಾಶ ಇರಲಿದೆ. ಪ್ರತಿ ಗುರುವಾರ ಮಧ್ಯಾಹ್ನದ ನಂತರ ತತ್ಕಾಲ್‌ ಬುಕ್ಕಿಂಗ್ ಮಾಡಬಹುದು ಎಂದು ಕುದುರೆಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಶಿವರಾಮ ಬಾಬು ತಿಳಿಸಿದ್ದಾರೆ.

ಚಾರಣಕ್ಕೆ ಪ್ರತಿ ತಿಂಗಳ 25ನೇ ತಾರೀಕಿನಂದು ಮುಂದಿನ 30 ದಿನಗಳಿಗೆ ಆನ್‍ಲೈನ್ ತಂತ್ರಾಂಶ (www.kudremukhanationalpark.in)ದಲ್ಲಿ ಬುಕಿಂಗ್ ಮಾಡಲು ಅವಕಾಶ ನೀಡಲಾಗಿದೆ.

ಒಬ್ಬರಿಗೆ ನೇತ್ರಾವತಿ ಚಾರಣಕ್ಕೆ ₹500, ಕುದುರೆಮುಖಕ್ಕೆ ₹575 ದರ ನಿಗದಿ ಮಾಡಲಾಗಿದೆ.



Join Whatsapp