ಟಿ20 ವಿಶ್ವಕಪ್​ 2024: ಸೂಪರ್-8 ಪಂದ್ಯದಲ್ಲಿ ಅಮೆರಿಕ ವಿರುದ್ಧ ಸೌತ್ ಆಫ್ರಿಕಾ ಗೆಲುವು

Prasthutha|

ಆಂಟಿಗುವಾ: ಅಮೆರಿಕ ವಿರುದ್ಧದ ಟಿ20 ವಿಶ್ವಕಪ್​ 2024 ಸೂಪರ್-8 ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡ 24 ರನ್​ಗಳಿಂದ ಗೆದ್ದು ಬೀಗಿದೆ. ಕ್ವಿಂಟನ್ ಡಿ ಕಾಕ್ ಅವರ ಭರ್ಜರಿ ಬ್ಯಾಟಿಂಗ್ ಜಯಕ್ಕೆ ಕಾರಣವಾಗಿದೆ‌.

- Advertisement -

ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ಸೂಪರ್​-8 ಹಂತದ ಗ್ರೂಪ್-2ರ ಮೊದಲ ಪಂದ್ಯದಲ್ಲಿ ಯುಎಸ್​ಎ 18 ರನ್​ಗಳಿಂದ ಸೋಲನುಭವಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಸೌತ್ ಆಫ್ರಿಕಾ, ಭರ್ಜರಿ ಬ್ಯಾಟಿಂಗ್ ನಡೆಸಿತು. ಕಠಿಣ ಪಿಚ್​​​ಗಳಲ್ಲೂ ಉತ್ತಮ ಮೊತ್ತ ಪೇರಿಸಿತು. ಅದರಲ್ಲೂ ಕ್ವಿಂಟನ್ ಡಿ ಕಾಕ್ ಸ್ಫೋಟಕ ಅರ್ಧಶತಕ ಸಿಡಿಸಿ ಗಮನ ಸೆಳೆದರು. ಪರಿಣಾಮ 20 ಓವರ್​​​​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 194 ರನ್ ಪೇರಿಸಿತು. ಸೌರಭ್ ನೇತ್ರಾವಲ್ಕರ್-ಹರ್ಮೀತ್ ಸಿಂಗ್ ತಲಾ 2 ವಿಕೆಟ್ ಪಡೆದರು. ಈ ಗುರಿ ಬೆನ್ನಟ್ಟಿದ ಅಮೆರಿಕ ಪ್ರತಿರೋಧ ತೋರಿತು. ಆಂಡ್ರಿಸ್ ಗೌಸ್ ಅರ್ಧಶತಕ ಸಿಡಿಸಿ ಹೋರಾಡಿದರೂ ಗೆಲುವು ಸಾಧ್ಯವಾಗಿಲ್ಲ.



Join Whatsapp