ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಜು. 10ರಂದು 3 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ. ಚುನಾವಣೆ ದಿನದಂದು ಮತದಾರರ ತೋರು ಬೆರಳಿನ ಬದಲು ಮಧ್ಯದ ಬೆರಳಿಗೆ ಶಾಯಿ ಹಾಕಲು ಚುನಾವಣೆ ಆಯೋಗ ನಿರ್ಧರಿಸಿದೆ.
ಜು. 10 ರಂದು ಡೆಹ್ರಾ, ಹಮೀರ್‌ಪುರ್ ಹಾಗೂ ನಾಲಾಗಢ್ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ನಡೆಯಲಿದೆ. ಇತ್ತೀಚೆಗೆ ಲೋಕಸಭೆ ಚುನಾವಣೆ ಮುಗಿದಿದ್ದು, ಅಂದು ಮತದಾರರ ಬೆರಳಿಗೆ ಹಾಕಿದ ಶಾಯಿ ಇನ್ನೂ ಮಾಸಿರುವುದಿಲ್ಲ.ಮತದಾರರಿಗೆ ಎಡಗೈನ ತೋರು ಬೆರಳು ಬದಲು ಮಧ್ಯದ ಬೆರಳಿಗೆ ಶಾಯಿ ಹಾಕಲಾಗುವುದು ಎಂದು ಹಿಮಾಚಲ ಪ್ರದೇಶ ಮುಖ್ಯ ಚುನಾವಣಾಧಿಕಾರಿ ಮನೀಷ್ ಗರ್ಗ್ ತಿಳಿಸಿದ್ದಾರೆ. ಯಾವುದೇ ಚುನಾವಣೆ ನಡೆದ ನಂತರ ಎರಡು ತಿಂಗಳ ಅವಧಿಯಲ್ಲಿ ಮತ್ತೂಂದು ಚುನಾವಣೆ ನಿಗದಿಯಾದರೆ, ಆಗ ಮತದಾರರಿಗೆ ಮಧ್ಯದ ಬೆರಳಿನ ಮೇಲೆ ಶಾಯಿ ಹಾಕಲಾಗುತ್ತದೆ.