ದೆಹಲಿ: ಎಸಿ ಆನ್ ಮಾಡದ ವಿಮಾನದೊಳಗಡೆ ಪ್ರಯಾಣಿಕರ ಸಂಕಷ್ಟ

Prasthutha|

ನವದೆಹಲಿ: ದೆಹಲಿಯಿಂದ ದರ್ಭಾಂಗಕ್ಕೆ ತೆರಳಬೇಕಿದ್ದ ಸ್ಪೇಸ್ ಜೆಟ್ ಎಸ್ ಜಿ 476 ಚೆಕ್ ಇನ್ ಆಗಿ 1 ಗಂಟೆ ಕಳೆಯಬೇಕಾಗಿ ಬಂದ ಪ್ರಯಾಣಿಕರು ಸಂಕಷ್ಟ ಅನುಭವಿಸಿದ್ದಾರೆ. ಬಿಸಿಲ ಬೇಗೆಗೆ ದೆಹಲಿ ತತ್ತರಿಸಿ ಹೋಗುತ್ತಿದ್ದು, ಚೆಕ್ ಇನ್ ಆಗಿ ಒಂದು ಗಂಟೆ ತನಕ ಅದರ ಕೂಡ ಎಸಿ ಅನ್ ಮಾಡಿರಲಿಲ್ಲ.

- Advertisement -

ವಿಪರೀತ ಸೆಕೆಯಿಂದ ಪರದಾಡುತ್ತಿರುವ ಪ್ರಯಾಣಿಕರ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು, ಸಿಬ್ಬಂದಿಯ ಈ ಕಾರ್ಯಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಬಿಸಿ ವಾತಾವರಣದಲ್ಲಿ ಎಸಿ ಇಲ್ಲದೆ ಕೆಲ ಪ್ರಯಾಣಿಕರು ಮೂರ್ಛೆ ಹೋಗಿದ್ದಾರೆ ಎಂದೂ ವರದಿಯಾಗಿದೆ.

ಪ್ರಯಾಣಿಕರು ದೂರಿದ ಮೇಲೂ ಸುಮಾರು ಒಂದು ಗಂಟೆ ಕಾಲ ಎಸಿ ಆನ್‌ ಆಗಲೇ ಇಲ್ಲ. ಇದರಿಂದ ವಿಮಾನದೊಳಗಿದ್ದ ಜನ ಸಂಕಷ್ಟ ಅನುಭವಿಸುತ್ತಾ ಪೇಪರ್‌ನಿಂದ ಗಾಳಿ ಬೀಸಿಕೊಂಡು ಕುಳಿತುಕೊಳ್ಳುವಂತಾಗಿತ್ತು.

Join Whatsapp