ಕೊಲೆ ಪ್ರಕರಣದಲ್ಲಿ ಭಾಗಿಯಾದ 7 ಮಂದಿಗೆ ದರ್ಶನ್ ನೇರ ಪರಿಚಯವೇ ಇಲ್ಲ

Prasthutha|

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಭಾಗಿಯಾದವರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ. ಅಚ್ಚರಿಯ ಸಂಗತಿ ಎಂದರೆ, ಕೊಲೆ ಪ್ರಕರಣದಲ್ಲಿ ಭಾಗಿಯಾದ 19 ಮಂದಿಯ ಪೈಕಿ 7 ಮಂದಿಗೆ ದರ್ಶನ್ ನೇರ ಪರಿಚಯವೇ ಇಲ್ಲ ಎಂದು ತಿಳಿದು ಬಂದಿದೆ.

- Advertisement -

ಕೃತ್ಯದಲ್ಲಿ ಭಾಗಿಯಾದವರು ದರ್ಶನ್ ಅಭಿಮಾನಿಗಳಾಗಿದ್ದು, ಹಲವರು ದರ್ಶನ್‌ನನ್ನು ಭೇಟಿಯಾಗಿದ್ದೇ ಕೊಲೆ ಕೇಸ್‌ನಲ್ಲಿ ದರ್ಶನ್ ಅರೆಸ್ಟ್ ಆದ ನಂತರ. ದರ್ಶನ್‌ಗಾಗಿ ಕೃತ್ಯ ಎಸಗಿದವರಲ್ಲಿ ಕೆಲವರು ದರ್ಶನ್‌ನನ್ನು ಪೊಲೀಸ್ ಸ್ಟೇಷನ್‌ನಲ್ಲಿಯೇ ಮುಖಾಮುಖಿ ನೋಡಿದ್ದಾರೆ. ಈ ಪ್ರಕರಣದಲ್ಲಿ ಪವಿತ್ರಾ ಗೌಡ, ಪವಿತ್ರಾ ಗೌಡ ಮ್ಯಾನೇಜರ್ ಪವನ್, ಸ್ಟೋನಿಬ್ರೂಕ್ಸ್ ಮಾಲೀಕ ವಿನಯ್, ದರ್ಶನ್ ಮ್ಯಾನೇಜರ್ ನಾಗರಾಜ್, ಸ್ಕಾರ್ಪಿಯೋ ಕಾರು ಮಾಲೀಕ ಪುನೀತ್, ವಿನಯ್, ದೀಪಕ್, ಪ್ರದೋಶ್, ಚಿತ್ರದುರ್ಗದ ರಾಘವೇಂದ್ರ, ಮಂಡ್ಯದ ನಂದೀಶ್ ಮಾತ್ರ ದರ್ಶನ್‌ಗೆ ನೇರ ಪರಿಚಯ ಇದ್ದಾರೆ. ಆದರೆ ರಾಘವೇಂದ್ರ ಜೊತೆ ಕಿಡ್ನಾಪ್ ಮಾಡಿದ್ದ ಅನು ಕುಮಾರ್, ಈಟಿಯೋಸ್ ಕಾರು ಚಾಲಕ ರವಿ, ಲಕ್ಷ್ಮಣ್, ಜಗದೀಶ್ ದರ್ಶನ್‌ನ್ನು ಕಂಡಿದ್ದೆ ಪೊಲೀಸ್ ಸ್ಟೇಷನ್‌ನಲ್ಲಿ ಎಂದು ತಿಳಿದು ಬಂದಿದೆ.

ಚಿತ್ರದುರ್ಗದಲ್ಲಿ ರಾಘವೇಂದ್ರನ ಜೊತೆ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿ ನಂತರ ಆರ್.ಆರ್.ನಗರದ ಪಟ್ಟಣಗೆರೆಗೆ ಬಿಟ್ಟು ಅನು, ರವಿ, ಜಗ್ಗ, ಲಕ್ಷ್ಮಣ್ ತೆರಳಿದ್ದರು. ನಂತರ ದೀಪಕ್ ಸೂಚನೆಯಂತೆ ರೇಣುಕಾಸ್ವಾಮಿ ಮೃತದೇಹವನ್ನು ಸುಮ್ಮನಹಳ್ಳಿ ರಾಜಕಾಲುವೆಗೆ ಬಿಸಾಡಿದ್ರು. ನಂತರ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ಹೋಗಿ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ರೇಣುಕಾಸ್ವಾಮಿ ಹತ್ಯೆ ಮಾಡಿದ್ದಾಗಿ ಕೇಶವ್, ಕಾರ್ತಿಕ್‌, ನಿಖಿಲ್‌ ನಾಯಕ್ ಸರೆಂಡರ್ ಆಗಿದ್ದರು ಎಂದು ತಿಳಿದು ಬಂದಿದೆ.

- Advertisement -

ಈ ಮಧ್ಯೆ, ಆರೋಪಿಗಳು ರೇಣುಕಾ ಸ್ವಾಮಿಯನ್ನು ಚಿತ್ರ ಹಿಂಸೆ ನೀಡಿ ಕೊಲ್ಲಲು ಎಲೆಕ್ಟ್ರಿಕ್‌ ಮೆಗ್ಗರ್ ಡಿವೈಸ್ ಬಳಸಿರುವುದು ಬಯಲಾಗಿದ್ದು, ಇದೀಗ ಮೃತ ರೇಣುಕಾಸ್ವಾಮಿಗೆ ಕರೆಂಟ್‌ ಶಾಕ್‌ ನೀಡಲು ಬಳಸಿದ್ದ ಮೆಗ್ಗರ್ ಡಿವೈಸ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.



Join Whatsapp