ಅಂಗವಿಕಲರ ಬದುಕಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಬಶೀರ್ ಚೊಕ್ಕಬೆಟ್ಟು: ಪೊಲೀಸ್ ಇಲಾಖೆಯಲ್ಲಿ 22 ವರ್ಷ ಸಾರ್ಥಕ ಸೇವೆ

Prasthutha|

ಮಂಗಳೂರು: ವೃತ್ತಿಯಲ್ಲಿ ಪೊಲೀಸ್ ಸಿಬ್ಬಂದಿಯಾದರೂ ಅಂಗವಿಕಲರ ಬದುಕಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವ ಅಸೈಗೋಳಿಯ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ ಸಿಬ್ಬಂದಿ ಬಶೀರ್ ಚೊಕ್ಕಬೆಟ್ಟು ಅವರು 22 ಸಾರ್ಥಕ ಸೇವೆ ಪೂರ್ಣಗೊಂಡು 23 ವರ್ಷಕ್ಕೆ ಪಾದರ್ಪಣೆ ಮಾಡಿದ್ದಾರೆ.

- Advertisement -

ಪತ್ರಿಕೆ ಮಾರಾಟ ಮಾಡಿ ಜೀವನ ಸಾಗಿಸಲು ಮುಂದಾದ ಬಶೀರ್ ಗೆ ಪತ್ರಿಕೆ ಮಾರಾಟದ ಕಾಯಕ ಕೈಹಿಡಿಯಲಿಲ್ಲ, ಮುಂದೆ ಬಶೀರ್ ತನ್ನ ಹಿರಿಯ ಸಹೋದರರ ನೆರವು ಪಡೆದು ವಾರದ ಸಂತೆಗಳಿಗೆ ತೆರಳಿ ಸಿಹಿತಿಂಡಿ, ಹಣ್ಣು ಹಂಪಲುಗಳು ಮತ್ತು ಹುಣಸೆ ಹಣ್ಣಿನ ವ್ಯಾಪಾರದಲ್ಲಿ ತೊಡಗುತ್ತಾರೆ, ಅದು ಕೂಡ ಬಶೀರ್ ಅವರ ಕೈ ಹಿಡಿಯಲಿಲ್ಲ, ಬಶೀರ್ ಬಳಿಕ ತಂದೆಯವರ ನೆರವಿನೊಂದಿಗೆ ಚೊಕ್ಕಬೆಟ್ಟು ಮಸೀದಿ ಬಳಿ ದಿನಸಿ ಅಂಗಡಿಯನ್ನು ತೆರೆಯುತ್ತಾರೆ, ಈ ದಿನಸಿ ಅಂಗಡಿಯಲ್ಲಿ ಹೆಚ್ಚಿನ ಲಾಭಾಂಶವೇನೂ ಕಂಡುಕೊಳ್ಳದಿದ್ದರೂ 1 ವರುಷ 8 ತಿಂಗಳ ಕಾಲ ಕುಂಟುತ್ತಲೇ ಸಾಗಿದವು. 1998 ರಲ್ಲಿ ಸುರತ್ಕಲ್ ನಲ್ಲಿ ನಡೆದ ಭೀಕರ ಕೋಮುಗಲಭೆ ಸಂದರ್ಭದಲ್ಲಿ ಹೇರಳಾಗಿದ್ದ ಕರ್ಫ್ಯೂ ವೇಳೆ ಮುಚ್ಚಿದ ಈ ಅಂಗಡಿ ಬಶೀರ್ ಬಳಿಕ ತೆರೆಯಲೇ ಇಲ್ಲ, ಹೀಗೆ ತನ್ನ ಹಣೆಯ ಮೇಲೆ ಕುಟುಂಬ ನಿರ್ವಹಣೆಯ ಹೊಣೆಯನ್ನು ಹೊತ್ತ ಬಶೀರ್ ಬಳಿಕ ಮತ್ತದೇ ಮಂಗಳೂರಿನ ಆಸ್ಪತ್ರೆಯ ಬಳಿ ಬಂದು ಪತ್ರಿಕೆ ಮಾರಾಟದ ಕಾಯಕದಲ್ಲಿ ತೊಡಗುತ್ತಾರೆ.

ಹೀಗೆ ಪತ್ರಿಕೆ ಮಾರಾಟ ಸಮಯದಲ್ಲಿ ಪತ್ರಿಕೆ ಮಾರಾಟ ಮಾಡುತ್ತಲೇ  ಅಲ್ಪಸಲ್ಪ ಪತ್ರಿಕೆ ಗಳ ಇನುಕು ನೋಟ ನೋಡುತ್ತಿದ್ದ ಬಶೀರ್ ಗೆ ಗೋಚರಿಸಿದ್ದು, ಅಂದಿನ ಆ ಹೊಸ ಸಂಜೆ ಪತ್ರಿಕೆಯಲ್ಲಿ ಪ್ರಕಟ ಗೊಂಡಿದ್ದ ಪೊಲೀಸ್ ಇಲಾಖೆಯೊಳಗಿನ ಕೆ ಎಸ್ ಆರ್ ಪಿ ಯಲ್ಲಿನ ಖಾಲಿ ಹುದ್ದೆಗೆ ಅರ್ಜಿ ಆಹ್ವಾನ ಎಂಬ ಲೇಖನ, ಅದರಂತೆ ಬಶೀರ್ ಚೊಕ್ಕಬೆಟ್ಟು ಅರ್ಜಿಯೊಂದನ್ನು ಸಲ್ಲಿಸುತ್ತಾರೆ,ಅದರಂತೆ ಮತ್ತೆ ಮುಂದಿನ ದಿನಗಳಲ್ಲಿ ಪೊಲೀಸ್ ಇಲಾಖೆಯೊಳಗಿನ ಇಂಟರ್ವ್ಯೂಗೆ ತೆರಳಿ ಮತ್ತದಕ್ಕೆ ಸಂಬಂಧಿಸಿದ ಎಲ್ಲಾ ಅರ್ಹತಾ ಪರೀಕ್ಷೆ ಗಳನ್ನು ಎದುರಿಸಿ ಎಲ್ಲದರಲ್ಲೂ ತೇರ್ಗಡೆ  ಹೊಂದಿ ನೌಕರಿಯನ್ನು ಗಿಟ್ಟಿಸಿಕೊಳ್ಳುತ್ತಾರೆ ಈ ಬಶೀರ್ ಚೊಕ್ಕಬೆಟ್ಟು. ಅದು 2002 ರ ಜೂನ್ 15 ರ ಶನಿವಾರ, ಅದು ಬಶೀರ್ ಚೊಕ್ಕಬೆಟ್ಟು ರವರ ಜೀವನ ವನ್ನೇ ಬದಲಾಯಿಸುತ್ತದೆ, ಅಲ್ಲಿಂದ ಶುರುವಾಗುತ್ತದೆ ಬಶೀರ್ ಚೊಕ್ಕಬೆಟ್ಟು ರವರ ವೃತ್ತಿ ಜೀವನದ ಪಯಣ ಪ್ರಾರಂಭವಾಗುತ್ತದೆ.

- Advertisement -

ವೃತ್ತಿಯಲ್ಲಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಏಳನೆಯ ಪಡೆ ಮಂಗಳೂರು ಇಲ್ಲಿಯ ಸಿಬ್ಬಂದಿಯಾಗಿ ಪ್ರವೃತ್ತಿಯಲ್ಲಿ ತನ್ನನ್ನು ತಾನು ಸಮಾಜ ಪರ ಚಿಂತನೆಯಲ್ಲಿ ತೊಡಗಿಸಿಕೊಂಡವರೇ ಈ ಬಶೀರ್ ಚೊಕ್ಕಬೆಟ್ಟು. ಮೂಲತಃ ಸುರತ್ಕಲ್ ನ ಚೊಕ್ಕಬೆಟ್ಟು ನಿವಾಸಿಯಾಗಿದ್ದು ದಿವಂಗತ ಅಬ್ದುಲ್ ಖಾದರ್ ಮತ್ತು ಖತೀಜ ದಂಪತಿಯ 10 ಮಕ್ಕಳ ಬೈಕಿ 9ನೇ ಪುತ್ರನಾಗಿ 1978 ರಲ್ಲಿ ಚೊಕ್ಕಬೆಟ್ಟು ವಿನಲ್ಲಿ ಜನಿಸಿದವರು, ಜೊತೆಗೆ ಸಮಾಜ ಪರ ಚಿಂತನೆಯನ್ನು ಮೈಗೂಡಿಸಿಕೊಂಡಿದ್ದಾರೆ. ಈಗಾಗಲೇ ಬಶೀರ್ ಅವರು ಬಹಳಷ್ಡು ಅಂಗವಿಕಲರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಅಂಗವಿಕಲರ ಸೌಲಭ್ಯದ ಜೊತೆಗೆ ಇತರರಿಗೂ ವಿಧವಾ ವೇತನ, ವೃದ್ಯಾಪ್ಯ ವೇತನ ಸೇರಿದಂತೆ ಹಲವಾರು ಸೌಲಭ್ಯ ಒದಗಿಸಿಕೊಡುವ ಮೂಲಕ ಸಮಾಜಸೇವೆಯಲ್ಲಿ ತೊಡಗಿದ್ದಾರೆ. ರಜಾ ದಿನ ಹಾಗೂ ಬಿಡುವಿನ ವೇಳೆಗಳಲ್ಲಿ ಆಶ್ರಮಗಳಿಗೂ ತೆರಳಿ ಹಿರಿಯರ ಸೇವೆ ಮಾಡುತ್ತಿದ್ದಾರೆ.


ಬಶೀರ್ ಚೊಕ್ಕಬೆಟ್ಟು ರವರ ಪಾಲಿಗೆ ಒಲಿದು ಬಂದ ಪ್ರಶಸ್ತಿಗಳೆಂದರೆ, 2010 ರಲ್ಲಿJci ಯುವ ಸಾಧಕ ಪ್ರಶಸ್ತಿ, 2011 ರಲ್ಲಿ ಕನ್ನಡ ಅಭಿವೃದ್ಧಿ ಸಮಿತಿ ಬೆಂಗಳೂರು ಇವರಿಂದ ರಾಜ್ಯಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ,2014 ರಲ್ಲಿ ಬೆಂಗಳೂರಿನ ಕರ್ನಾಟಕ ಸಂಸ್ಕೃತಿಕ ಅಕಾಡೆಮಿಯಿಂದ ಸಮಾಜ ಸೇವಾ ರತ್ನ ಪ್ರಶಸ್ತಿ,2020 ರಲ್ಲಿ ಹೊರದೇಶದಲ್ಲಿ ನೆಲೆಸಿರುವ ಯುನೈಟೆಡ್ ಚೊಕ್ಕಬೆಟ್ಟು ಗ್ಲೋಬಲ್ ಫಾರಂ ಇವರ ವತಿಯಿಂದ ಹುಟ್ಟೂರ ಸನ್ಮಾನ,2021 ರಲ್ಲಿ ಚೊಕ್ಕಬೆಟ್ಟು ಬ್ರದರ್ಸ್ ವತಿಯಿಂದ ಹುಟ್ಟೂರ ಶ್ರೇಷ್ಠ ಸಾಧಕ ಪ್ರಶಸ್ತಿ,2023 ರಲ್ಲಿ ಪುತ್ತೂರಿನ ಗಡಿನಾಡ ಶ್ರೇಯಾಭಿವೃದ್ಧಿ ಟ್ರಸ್ಟ್ ವತಿಯಿಂದ ಕಾಯಕ ಶ್ರೀ ಪ್ರಶಸ್ತಿ ಸೇರಿದಂತೆ ನಾನಾ ಫಾರಿತೋಷಕ ಗಳನ್ನು ತನ್ನ ಮಡಿಲಿಗೇರಿಸಿಕೊಂಡಿದ್ದಾರೆ.



Join Whatsapp