ಶಾಲೆ ಆರಂಭವಾದರೂ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ನೀಡಿಲ್ಲ: ರಾಜ್ಯ ಸರ್ಕಾರದ ವಿರುದ್ಧ ಆರ್ ಅಶೋಕ್ ಕಿಡಿ

Prasthutha|

- Advertisement -

ಬೆಂಗಳೂರು: ಒಂದೂವರೆ ತಿಂಗಳ ಬೇಸಿಗೆ ರಜೆ ಬಳಿಕ ಇತ್ತೀಚೆಗೆ ರಾಜ್ಯದ ಎಲ್ಲೆಡೆ ಶಾಲೆಗಳು ಪುನಾರಂಭವಾಗಿವೆ. ರಾಜ್ಯ ಸರ್ಕಾರ ವಿದ್ಯಾರ್ಥಿಗಳಿಗೆ ಇನ್ನೂ ಪಠ್ಯಪುಸ್ತಕ ನೀಡಿಲ್ಲ. ಶಾಲೆ ಆರಂಭವಾದರೂ ಪಠ್ಯಪುಸ್ತಕ ಕೊಡದಿರುವುದು ಸರಿಯಲ್ಲ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್
ಕಿಡಿಕಾರಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉಚಿತ ಅಂತ‌ ಹೇಳಿ ಇದುವರೆಗೂ ಸರಿಯಾದ ವ್ಯವಸ್ಥೆ ಕಲ್ಪಿಸಿಲ್ಲ ಎಂದು ಹೇಳಿದ್ದಾರೆ.

ಇನ್ನೂ ಉಚಿತ 10 ಯೋಜನೆ ಕೊಡಿ, ನಮ್ಮ ವಿರೋಧ ಇಲ್ಲ. ಆದರೆ ಆರ್ಥಿಕ ಪರಿಸ್ಥಿತಿ ಬಗ್ಗೆ ರಾಜ್ಯ ಸರ್ಕಾರ ಶ್ವೇತ ಪತ್ರ ಹೊರಡಿಸಲಿ. ಸರ್ಕಾರ ಪಾಪರ್ ಆಗಿದ್ಯಾ, ಹಣದ ಹೊಳೆ ಹರಿಯುತ್ತಿದ್ಯಾ ಗೊತ್ತಾಗಲಿ. ಸಾರಿಗೆ ಇಲಾಖೆ ಮುಳುಗುವ ಸ್ಥಿತಿಗೆ ಬಂದಿದೆ. ಹಾಲು ಉತ್ಪಾದಕರಿಗೆ ನೀಡುತ್ತಿದ್ದ ಪ್ರೋತ್ಸಾಹ ಧನ ನಿಲ್ಲಿಸಿದ್ದಾರೆ. ನೌಕರರ ಸಂಬಳ ಕೊಡಲು ಸಾಲ‌ ಮಾಡುವ ಪರಿಸ್ಥಿತಿ ಬಂದಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.



Join Whatsapp