“ಈಗಷ್ಟೇ ನಾನು ಮಸೀದಿಗೆ ಹೋಗಿ ನೀರು ಕುಡಿದು ಬಂದೆ, ಯಾರೂ ನನ್ನ ಹೆಸರು-ಧರ್ಮ ಕೇಳಲಿಲ್ಲ”। ಯುವಕ ಸಾಗರ್ ಸಿಂಗ್ ಥೋಮರ್ ಫೇಸ್ಬುಕ್ ಪೋಸ್ಟ್ ವೈರಲ್

Prasthutha|

ಅಲಿಗಢ : ಉತ್ತರ ಪ್ರದೇಶದ ಅಲಿಗಢದ ಯುವಕ ಸಾಗರ್ ಸಿಂಗ್ ಥೋಮರ್ ಎನ್ನುವ ಯುವಕ ತನ್ನ ಫೇಸ್ಬುಕ್ ಪೋಸ್ಟ್ ಒಂದರಲ್ಲಿ ಮಸೀದಿಯೊಂದರ ಅಂಗ ಸ್ನಾನ ಮಾಡುವ ಸ್ಥಳದಲ್ಲಿ ನೀರು ಕುಡಿಯುತ್ತಿರುವ ಫೋಟೋ ಒಂದನ್ನು ಹಾಕಿದ್ದು, ಅದರಲ್ಲಿ “ ನಾನು ಈಗಷ್ಟೇ ಮಸೀದಿಯಲ್ಲಿನೀರು ಕುಡಿದುಕೊಂಡು ಬಂದೆ. ಅಚ್ಚರಿಯ ವಿಷಯವೇನೆಂದರೆ ಅಲ್ಲಿ ಯಾರೂ ನನ್ನ ಹೆಸರು ಮತ್ತು ಧರ್ಮ ಯಾವುದೆಂದು ಕೇಳಲಿಲ್ಲ ಎಂದು” ಒಕ್ಕಣೆ ಬರೆದುಕೊಂಡಿದ್ದಾನೆ. ಇದು ಸಾಮಾಜಿಕ ಜಾಲತಾಣದಾದ್ಯಂತ ವೈರಲ್ ಆಗಿದ್ದು, ಯುವಕನ ಪೊಸ್ಟ್ ಗೆ ಮೆಚ್ಚುಗೆಗಳ ಮಹಾಪೂರವೇ ಹರಿದು ಬರುತ್ತಿದೆ.

- Advertisement -

ಸಾಗರ್ ಸಿಂಗ್ ಥೋಮರ್ ಈ ಪೋಸ್ಟನ್ನು ಮಾಡಲು ಕಾರಣಗಳು ಇದೆ. ಇತ್ತಿಚೆಗೆ ಇದೇ ಉತ್ತರ ಪ್ರದೇಶದಲ್ಲಿ ಆಸಿಫ್ ಎನ್ನುವ ಮುಸ್ಲಿಮ್ ಬಾಲಕನೋರ್ವ ದೇವಸ್ಥಾನವೊಂದರಲ್ಲಿ ನೀರು ಕುಡಿದ ಕಾರಣಕ್ಕಾಗಿ ಮತಾಂಧ ಯುವಕನೋರ್ವ ಆ ಬಾಲಕನ ಮೇಲೆ ಮಾರಣಂತಿಕವಾಗಿ ಹಲ್ಲೆ ನಡೆಸಿದ್ದ. ಮಾತ್ರವಲ್ಲ ತಾನು ಹಲ್ಲೆ ನಡೆಸಿದ ದೃಶ್ಯಗಳನ್ನು ವೀಡಿಯೋ ಮಾಡುವಂತೆ ತನ್ನೊಂದಿಗೆ ಇದ್ದವನೊಂದಿಗೆ ಕೇಳಿಕೊಂಡಿದ್ದ. ನಂತರ ಆ ವೀಡಿಯೋವನ್ನು ಹಿಂದೂ ಏಕ್ತಾ ಸಂಘ್ ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿ ವೈರಲ್ ಮಾಡಿದ್ದ. ಇದು ದೇಶದಾದ್ಯಂತ ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಜಾಲ ತಾಣಗಳಲ್ಲಿ #SorryAsif ಎಂಬ ಹ್ಯಾಶ್ ಟ್ಯಾಗ್ ಕೂಡಾ ಟ್ರೆಂಡಿಂಗ್ ಆಗಿತ್ತು.

ಇದೀಗ ಅಂತಹಾ ಮತಾಂಧ ಮನೋಸ್ಥಿತಿಗಳಿಗೆ ತಪರಾಕಿ ನೀಡುವಂತಹಾ ನಡೆಯೊಂದರಲ್ಲಿ ಯುವಕ ಸಾಗರ್ ಸಿಂಗ್ ಅಲಿಗಢದ ಮಸೀದಿಯೊಂದಕ್ಕೆ ಹೋಗಿ ಅಲ್ಲಿನ ನೀರು ಕುಡಿದು ನಂತರ ಆ ಬಗ್ಗೆ ಫೇಸ್ಬುಕ್ ಪೋಸ್ಟ್ ಹಾಕಿದ್ದ. ಆ ಮೂಲಕ ಸಮಾಜಕ್ಕೆ ಉತ್ತಮವಾದಂತಹಾ ಸಂದೇಶವನ್ನು ನೀಡಿದ್ದಾನೆ. ಅದೀಗ ವೈರಲ್ ಆಗಿದೆ

अभी मैं मस्जिद गया था और पानी पीकर आया और ताज्जुब की बात ये किसी ने मेरा नाम व धर्म नहीं पूछा…

Posted by Sagar Singh Tomar on Monday, March 15, 2021
- Advertisement -



Join Whatsapp